ನ್ಯೂಸ್ ನಾಟೌಟ್ : ಆ ಒಂದು ಕರೆ ಮಾಡದೇ ಇರುತ್ತಿದ್ದರೆ ಮೊಯ್ದಿನ್ ಬಾವಾ ಅವರಿಗೆ ಕಾಂಗ್ರೆಸ್ ನಿಂದ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಸಿಗುತ್ತಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ!
ಅನ್ಯ ಪಕ್ಷದ ನಾಯಕರ ಮೂಲಕ ಒತ್ತಡ ತಂದ ಕಾಂಗ್ರೆಸ್ ನಾಯಕ ಮೊಯಿದ್ದಿನ್ ಬಾವಾ ಅವರಿಗೆ ಇನ್ನೇನು ಟಿಕೆಟ್ ಸಿಕ್ಕಿ, ಬಿಫಾರಂ ಕೈ ತಲುಪಲು ಕೇವಲ ಗಂಟೆಗಳ ಕಾಲ ಮಾತ್ರ ಬಾಕಿ ಇತ್ತು.ಕಡೆ ಗಳಿಗೆಯಲ್ಲಿ ಟಿಕೆಟ್ ಕಳೆದುಕೊಂಡಿದ್ದಾರೆ.ಸಿದ್ದರಾಮಯ್ಯ ಬಣದ ಮೊಯಿದ್ದಿನ್ ಬಾವಾ ಮತ್ತು ಡಿಕೆ ಶಿವಕುಮಾರ್ ಬಣದ ಇನಾಯತ್ ಅಲಿ ಮಧ್ಯೆ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ಗಾಗಿ ಭಾರೀ ಫೈಟ್ ನಡೆಯುತ್ತಿದ್ದದ್ದು ಇಂದು ನಿನ್ನೆಯ ವಿಷಯವೇನಲ್ಲ. ಆದರೆ ಮೊಯಿದ್ದಿನ್ ಬಾವಾಗೆ ಟಿಕೆಟ್ ಬಹುತೇಕ ಖಚಿತವಾಗಿತ್ತು. ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲಿ ಬಾವಾ ಹೆಸರು ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು.
ಕಾಂಗ್ರೆಸ್ ನ ಮೂರನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ತನ್ನ ಹೆಸರು ಇಲ್ಲದನ್ನು ಮನಗಂಡ ಬಾವಾ ಅವರು ಬೇರೆ ಪಕ್ಷದ ಪ್ರಭಾವಿ ನಾಯಕರಿಂದ ಖರ್ಗೆಗೆ ಕರೆ ಮಾಡಿಸಿದರು. ಬಾವಾಗೆ ಟಿಕೆಟ್ ಕೊಡಿ, ಗೆಲ್ಲುವ ಅವಕಾಶ ಜಾಸ್ತಿ ಇದೆ ಎಂದು ಬ್ಯಾಟ್ ಬೀಸಿದ್ದರು.ಇದರಿಂದ ಸಿಟ್ಟಾದ ಖರ್ಗೆ ತಮ್ಮ ಪಕ್ಷದ ಟಿಕೆಟ್ ಯಾರಿಗೆ ಕೊಡಬೇಕು? ಕೊಡಬಾರದು ಎನ್ನುವುದನ್ನು ನಾವೇ ನಿರ್ಧಾರ ಮಾಡುತ್ತೇವೆ. ಬೇರೆ ವ್ಯಕ್ತಿ ಕರೆ ಮಾಡಿ ಲಾಬಿ ಮಾಡುವುದು ಅಂದರೆ ಏನು ಅರ್ಥ ಎಂದು ಬಾವಾಗೆ ಯಾವುದೇ ಕಾರಣಕ್ಕೂ ಈ ಬಾರಿ ಟಿಕೆಟ್ ಕೊಡಲೇಬಾರದು ಎಂದು ನಿಶ್ಚಯಿಸಿದರು.ಇದರಿಂದ ಬಾವಾ ಅವರಿಗೆ ಟಿಕೇಟ್ ಕೈ ತಪ್ಪಿದ್ದು,ಇನಾಯತ್ ಅಲಿಯವರ ಪಾಲಾಗಿದೆ. ಸದ್ಯ ಜೆಡಿಎಸ್ ಸೇರ್ಪಡೆಗೊಂಡಿರುವ ಬಾವಾ ಅವರು ಮಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.