ನ್ಯೂಸ್ ನಾಟೌಟ್ : ಗ್ಯಾಸ್ ಪಂಪ್ ಸಿಬ್ಬಂದಿಯೊಬ್ಬರು ಆಟೋ ಚಾಲಕರೊಬ್ಬರಿಂದ ಅಧಿಕ ದರ ಪಡೆದು ವಾಗ್ವಾದ ನಡೆಸಿದರೆಂಬ ಸುದ್ದಿ ತಿಳಿದು ಪಂಪ್ ಕಚೇರಿಯತ್ತ ಅಟೋಚಾಲಕರು ಜಮಾಯಿಸಿದ ಘಟನೆ ನಡೆದಿದೆ.
ಮುಂಜಾನೆ 6ರಿಂದ 9ರ ವರೆಗೆ ಆಟೋ ಎಲ್.ಪಿ.ಜಿ ದರದಲ್ಲಿ ಕಡಿತವಾಗಿದ್ದರೂ ಗ್ಯಾಸ್ ಪಂಪ್ ಸಿಬ್ಬಂದಿ ಹಳೆ ದರದಲ್ಲಿಯೇ ಗ್ಯಾಸ್ ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಹಿನ್ನಲೆಯಲ್ಲಿ ವಾಗ್ವಾದ ನಡೆಯಿತು ಎನ್ನಲಾಗಿದೆ.ಕೆಲ ಸಮಯದ ಬಳಿಕ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದರು. ಆಟೋ ಚಾಲಕರೊಂದಿಗೆ ಸಿಬ್ಬಂದಿ ಉಡಾಫೆ ಉತ್ತರ ನೀಡಿದರೆಂಬ ವಿಚಾರಕ್ಕೆ ಆಟೋ ಚಾಲಕಮಾಲಕರು ಎಲ್ಪಿಜಿ ಪಂಪ್ ಮುಂದೆ ದೌಡಾಯಿಸಿದ್ದರು ಎಂದು ತಿಳಿದು ಬಂದಿದೆ.