ನ್ಯೂಸ್ ನಾಟೌಟ್ : ಶಾರೀರಿಕ ಅನ್ಯೋನ್ಯತೆಯ ವಿವಾದದ ನಂತರ ಪತಿಯೊಂದಿಗೆ ಜಗಳವಾಡಿ ಮಹಿಳೆಯೊಬ್ಬರು ಬಾವಿಗೆ ಹಾರಿದ್ದಾರೆ. ಆಕೆಯನ್ನು ರಕ್ಷಿಸಲು ಪತಿ ಬಾವಿಗೆ ಹಾರಿದ್ದಾನೆ. ಬಾವಿಯಿಂದ ಅವಳನ್ನು ರಕ್ಷಿಸಿದ್ದು, ಮತ್ತು ಆ ನಂತರ, ಅವಳನ್ನು ಕೊಂದ ವಿಚಿತ್ರ ಆಘಾತಕಾರಿ ಘಟನೆ ಛತ್ತೀಸ್ಗಢದ ಜಶ್ಪುರ ಜಿಲ್ಲೆಯಲ್ಲಿ ಮಂಗಳವಾರ ವರದಿಯಾಗಿದೆ.
ಶಂಕರ್ ರಾಮ್ ಮತ್ತು ಅವರ ಪತ್ನಿ ಆಶಾ ಬಾಯಿ ಇಬ್ಬರೂ ಸೋಮವಾರ ರಾತ್ರಿ ಮದ್ಯ ಸೇವಿಸಿ ಮಲಗಿದ್ದರು. ಆಗ ಶಂಕರ್ ತನ್ನ ಪತ್ನಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಹೇಳಿದ್ದಾನೆ. ಶಂಕರ್ ಜೊತೆ ಸಂಸಾರ ನಡೆಸಲು ಆಶಾ ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ದೈಹಿಕ ಅನ್ಯೋನ್ಯತೆಯ ಜಗಳ ಮಿತಿಮೀರಿ ಆಶಾ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ್ದಾಳೆ. ಶಂಕರ್ ಕೂಡ ಪತ್ನಿಯನ್ನು ರಕ್ಷಿಸಲು ಬಾವಿಗೆ ಹಾರಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಆಶಾಳನ್ನು ರಕ್ಷಿಸಿ ಬಾವಿಯಿಂದ ಹೊರತೆಗೆದರು.
ಶಂಕರ್ ಆಶಾಳನ್ನು ರಕ್ಷಿಸಿ ಬಾವಿಯಿಂದ ಹೊರತೆಗೆದ ಬಳಿಕ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ಶಂಕರ್ ಆಶಾಳ ಖಾಸಗಿ ಅಂಗಗಳಿಗೆ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಆಕೆಯನ್ನು ಕೊಂದ ಬಳಿಕ ರಾತ್ರಿಯಿಡೀ ಪತ್ನಿಯ ಶವದ ಬಳಿಯೇ ಕುಳಿತಿದ್ದ ಎನ್ನಲಾಗಿದೆ.
ಬೆಳಗ್ಗೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಶಂಕರನನ್ನು ಬಂಧಿಸಿ ಎಫ್.ಐ.ಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಠಾಣಾ ಪ್ರಭಾರಿ ಗಾರ್ಡನ್ ಜಗಸೇ ಪಂಕ್ರಾ ತಿಳಿಸಿದ್ದಾರೆ.