ಮೊಬೈಲ್ ಫೋನ್ ಕಳ್ಳತನ ಅಥವಾ ಕಳೆದುಹೋದಗ ಕಂಡುಹಿಡಿಯಲು ಸಾರ್ವಜನಿಕರ ನೆರವಿಗೆ ಮಂಗಳೂರು ಪೊಲೀಸರು ಪರಿಹಾರವನ್ನು ಹುಡುಕಿದ್ದಾರೆ. CEIR ಪೋರ್ಟಲ್ ಮೂಲಕ ಕಳೆದುಹೋದ ನಿಮ್ಮ ಮೊಬೈಲ್ ನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದುಹೋದ ಮೊಬೈಲ್ ಗಳ ಪತ್ತೆಗೆ ಈಗಾಗಲೇ CEIR ಪೋರ್ಟಲ್ ಕಾರ್ಯಾಚರಿಸುತ್ತಿದ್ದು, ಅದನ್ನು ಬಳಸಿ ಮಂಗಳೂರು ನಗರದಲ್ಲಿ ಇದುವರೆಗೆ 200ಕ್ಕೂಅಧಿಕ ಮೊಬೈಲ್ ಗಳನ್ನು ಪತ್ತೆ ಹಚ್ಚಲಾಗಿದೆ.
ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಲು, ಜನರಿಗೆ ಸಹಾಯಕ್ಕಾಗಿ ವಾಟ್ಸಪ್ ನಂಬರ್ ಸೇವೆ ಮಂಗಳೂರಿನಲ್ಲಿ ಆರಂಭಿಸಲಾಗಿದ್ದು ಮೊಬೈಲ್ ಕಳೆದುಕೊಂಡವರು ಪೋರ್ಟಲ್ ನಲ್ಲಿ ನೇರವಾಗಿ ಮಾಹಿತಿ ನೀಡಬಹುದು.
ಇಲ್ಲವಾದರೆ 8277949183 ವಾಟ್ಸಪ್ ನಂಬರ್ ಗೆ ‘hi’ ಮೆಸೇಜ್ ಮಾಡಿದರೆ ಪೊಲೀಸರೆ ಲಿಂಕ್ ಕಳುಹಿಸಿ ಯಾವ ರೀತಿ ಮಾಹಿತಿ ಅಪ್ ಲೋಡ್ ಮಾಡಬೇಕೆಂಬುದನ್ನು ತಿಳಿಸುತ್ತಾರೆ. ಮೊಬೈಲ್ ನ IMEI ಸಂಖ್ಯೆಯನ್ನು ಹೊಂದಿರುವುದು ಅಗತ್ಯ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.