ನ್ಯೂಸ್ ನಾಟೌಟ್ :ಮನುಷ್ಯರು ಗುಹೆಯೊಳಗೆ ಹೋಗೋದು ಅಂದ್ರೆನೆ ಭಯ.ಇನ್ನು ಅದರಲ್ಲಿ ಜೀವನ ಮಾಡೋದಾ ? ಅಬ್ಬಬ್ಬಾ ಇದನ್ನು ಊಹಿಸಿಕೊಳ್ಳುವುದಕ್ಕು ಅಸಾಧ್ಯವೆಂಬಂತಿದೆ.ಇಲ್ಲೊಬ್ಬರು ಬರೋಬ್ಬರು ೨೩೦ ಅಡಿ ಆಳದ ಗುಹೆಯೊಳಗೆ ಹೋಗಿದ್ದು ಅಲ್ಲದೇ ೫೦೦ ದಿನಗಳ ಕಾಲ ವಾಸ ಮಾಡಿದ್ದಾರೆ.ಅದು ಕೂಡ ಮಹಿಳೆ ಅಂದರೆ ನೀವು ಹುಬ್ಬೇರಿಸದೇ ಇರಲಾರಿರಿ.
ಸ್ಪೇನ್ನ ಮ್ಯಾಡ್ರಿಡ್ ನಲ್ಲಿರುವ ಮಹಿಳಾ ಪರ್ವತಾರೋಹಿ ಒಬ್ಬರು ಈ ಸಾಹಸ ಮಾಡಿ ಗಟ್ಟಿಗಿತ್ತಿ ಎನಿಸಿಕೊಂಡಿದ್ದಾರೆ. ಬಿಟ್ರೀಜ್ ಫ್ಲಾಮಿನಿ ಎಂಬ 50 ವರ್ಷದ ಪರ್ವತಾರೋಹಿ ಈ ಸಾಧನೆ ಮಾಡಿದ ಮಹಿಳೆ. ಅವರು ಮ್ಯಾಡ್ರಿಡ್ ಬಳಿಯ ಗ್ರವಾಡಾದ ಗುಹೆಯಲ್ಲಿ ತಂಗಿದ್ದರು ಎಂದು ತಿಳಿದು ಬಂದಿದ್ದು,ಇದೀಗ ಅದರಿಂದ ಹೊರಗೆ ಬಂದಿದ್ದಾರೆ. ಆಧುನಿಕ ಮಾನವನೊಬ್ಬ ಈ ಸಾಹಸ ಮಾಡಲು ಸಾಧ್ಯನಾ ಅನ್ನುವಂಥದ್ದು ಕೂಡ ಅಚ್ಚರಿಗೆ ಕಾರಣವಾಗಿದೆ.
ಮಾತ್ರವಲ್ಲ ಇದೊಂದು ವಿಶ್ವದಾಖಲೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಆಗ 48 ವರ್ಷ,ಈಗ 50 ವರ್ಷ :
ಅಂದ ಹಾಗೆ ಇವರು ಪುಸ್ತಕ ಬರೆಯಲೆಂದು ಈ ಸಾಹಸ ಮಾಡಿದ್ದರು ಎಂದು ತಿಳಿದು ಬಂದಿದೆ. ಗುಹೆಯಲ್ಲಿನ ಮನುಷ್ಯರ ಮನೋವೈಜ್ಞಾನಿಕ ಬದಲಾವಣೆಗಳು ಏನಿರುತ್ತವೆ? ಎಂದು ಅಧ್ಯಯನ ಮಾಡಲು ಈ ಸಾಹಸ ಮಾಡಿದ್ದು,ಗುಹೆಯ ಹೊರಗೆ ಅವರ ಟೀಂನ ಸದಸ್ಯರು ತುರ್ತು ಸಹಾಯಕ್ಕೆ ಮಾತ್ರ ನೆರವು ನೀಡುವ ಸೌಲಭ್ಯ ಕಲ್ಪಿಸಿದ್ದರು. ಅದು ಬಿಟ್ರೆ ಬರೋಬ್ಬರಿ ೨ ವರ್ಷ ಕಾಲ ಗುಹೆಯಲ್ಲೇ ಏಕಾಂಗಿಯಾಗಿ ಕಾಲ ಕಳೆದರು ಎನ್ನುವುದು ವಿಶೇಷ.ಕಳೆದ ಎರಡು ತಿಂಗಳಿಂದ ಅವರು ಸಂಪೂರ್ಣವಾಗಿ ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿದ್ದರಂತೆ!
ಗುಹೆಯಲ್ಲಿ ಇದ್ದ 500 ದಿನಗಳಲ್ಲಿ ಹೊರಜಗತ್ತಿನಲ್ಲಿ ಏನೆಲ್ಲ ನಡೆದಿದೆ ಎಂಬ ಯಾವುದೇ ಮಾಹಿತಿ ನನಗೆ ತಿಳಿದಿಲ್ಲ ಎನ್ನುವ ಅವರು ನಿಜಕ್ಕೂ ಗ್ರೇಟ್ ಎಂದೇ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪ್ರಪಂಚದ ಜಂಜಾಟಗಳಿಗಿಂತಲೂ ಗುಹೆಯೇ ಚೆನ್ನಾಗಿದೆ ಎನ್ನುವ ಅವರು ವಾಸ್ತವವಾಗಿ ನಾನು ಗುಹೆಯಿಂದ ಹೊರಗೆ ಬರಲು ಯೋಚಿಸಿರಲಿಲ್ಲ ಎಂದು ಫ್ಲಾಮಿನಿ ಹೇಳಿದ್ದಾರೆ.ಸದ್ಯ ಅಧ್ಯಯನ ನಡೆಸಲೆಂದು ಮುಂದಾದ ಫ್ಲಾಮಿನಿ ಅವರನ್ನು ಇದೀಗ ಸ್ಪೇನ್ನ ವಿಜ್ಞಾನಿಗಳೇ ಅಧ್ಯಯನ ಮಾಡಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ. ಇದುವರೆಗೆ ಚಿಲಿ ಬೊಲಿವಿಯಾದ ಗಣಿಗಾರರು 2,257 ಅಡಿಯ ಆಳದ ಗಣಿಯಲ್ಲಿ 66 ದಿನ ಸಿಲುಕಿ ಹೊರ ಬಂದಿದ್ದೇ ದಾಖಲೆಯಾಗಿತ್ತು.ಈ ಎಲ್ಲ ದಾಖಲೆಗಳನ್ನು ಮುರಿದು ಈ ಮಹಿಳೆ ಸಾದನೆ ಮಾಡಿದ್ದು ನಿಜಕ್ಕೂ ಹೆಮ್ಮೆಯ ವಿಚಾರ.