ಕರಾವಳಿ

ಬಂಟ್ವಾಳದಲ್ಲಿ ಬಾಲ್ಯ ವಿವಾಹ, ಚೈಲ್ಡ್‌ ಲೈನ್‌ ಅಧಿಕಾರಿಗಳಿಂದ ದಾಳಿ, ಹೆತ್ತವರ ಮೇಲೆ ಕೇಸು ದಾಖಲು

260
Spread the love

ಬಂಟ್ವಾಳ: ಬಾಲ್ಯ ವಿವಾಹಕ್ಕೆ ಕಾನೂನಿನ ಪ್ರಕಾರ ಅವಕಾಶ ಇಲ್ಲದಿದ್ದರೂ ಇತ್ತೀಚೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ತುಂಬೆಯಲ್ಲಿ ಬಾಲ್ಯ ವಿವಾಹ ನಡೆದ ಘಟನೆ ಬೆಳಕಿಗೆ ಬಂದಿದೆ. ಸೆ.19 ರಂದು ಬಾಲ್ಯ ವಿವಾಹ ನಡೆಯುತ್ತಿದೆ ಅನ್ನುವ ಖಚಿತ ಮಾಹಿತಿ ಪ್ರಕಾರ ಚೈಲ್ಡ್‌ಲೈನ್‌ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು, ಸ್ಥಳೀಯ ಶಾಲಾ ಮುಖ್ಯ ಶಿಕ್ಷಕರು ಸ್ಥಳಕ್ಕೆ ಭೇಟಿ ನೀಡಿದಾಗ 20 ವರ್ಷದ ಬಾಲಕನಿಗೆ ಅಪ್ರಾಪ್ತೆಯನ್ನು ವಿವಾಹ ಮಾಡಿರುವುದು ಬೆಳಕಿಗೆ ಬಂದಿದ್ದು ಸದ್ಯ ಎರಡೂ ಕುಟುಂಬದ ಪೋಷಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

See also  ಸಂಪಾಜೆ:ಹಾಡ ಹಗಲಿನಲ್ಲಿಯೇ ರಾಜಾರೋಷವಾಗಿ ತಿರುಗಾಡಿದ 2 ಕಾಡಾನೆಗಳು..!ಕಂಗಾಲಾದ ಸ್ಥಳೀಯ ಜನತೆ ..
  Ad Widget   Ad Widget   Ad Widget