ನ್ಯೂಸ್ ನಾಟೌಟ್ : ಸುಮಾರು 20 ಯುವಕರು ಉತ್ತರ ಪ್ರದೇಶದ ಬಾರಾಬಂಕಿ ಪ್ರದೇಶದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪತ್ನಿ ಮತ್ತು ಮಗಳಿಗೆ ಕಿರುಕುಳ ನೀಡಿದ ಘಟನೆ ಲಕ್ನೋದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
20 ಯುವಕರು ಪೊಲೀಸ್ ಲೈನ್ನ ಗೇಟ್ನ ಹೊರಗೆ ಸಬ್ ಇನ್ಸ್ಪೆಕ್ಟರ್ ಪತ್ನಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಆರೋಪಿಗಳ ಪತ್ತೆಗೆ ಲಕ್ನೋದ ಬಾರಾಬಂಕಿ ಪೊಲೀಸರು ಶೋಧ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಆರು ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.
ಏಪ್ರಿಲ್ 12 ರಂದು ರಾತ್ರಿ ಸಬ್ ಇನ್ಸ್ಪೆಕ್ಟರ್ ಅವರ ಕುಟುಂಬದ ಸದಸ್ಯರು ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. 10-12 ಯುವಕರು ತಾಯಿ ಮತ್ತು ಮಗಳಿಗೆ ಅಶ್ಲೀಲ ಸನ್ನೆ ಮಾಡಿದ್ದಾರೆ ಎಂದು ಎಸ್ಎಚ್ಒ ಕೊತ್ವಾಲಿ, ಸಂಜಯ್ ಮೌರ್ಯ ಹೇಳಿದ್ದಾರೆ.
ಮಹಿಳೆ ಮತ್ತು ಆಕೆಯ 15 ವರ್ಷದ ಮಗಳು ಬುಧವಾರ ರಾತ್ರಿ ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ಹಿಂದಿರುಗುತ್ತಿದ್ದಾಗ 10-12 ಯುವಕರು ಅಶ್ಲೀಲ ಸನ್ನೆ ಮಾಡಿದ್ದು, ತಾಯಿ ಮತ್ತು ಮಗಳು ಅವರ ವಿರುದ್ದ ಮಾತನಾಡಲು ಮುಂದಾದಾಗ ಯುವಕರು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಎಸ್ಎಚ್ಒ ತಿಳಿಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು ಮತ್ತು ಕೆಲವು ಆರೋಪಿಗಳನ್ನು ಸಲ್ಮಾನ್, ಪ್ರಿಯಮ್ ಜೈನ್, ಯೆಯಾ, ಬಿಸ್ವಾ, ರಾಘವ್ ಅಗರ್ವಾಲ್, ವಿಕಾಸ್ ಕುಮಾರ್, ವಿವೇಕ್ ಕುಮಾರ್, ದುರ್ಗೇಶ್ ಸಿಂಗ್ ಎಂದು ಗುರುತಿಸಿದ್ದಾರೆ ಎನ್ನಲಾಗಿದೆ.
10-12 ಅಪರಿಚಿತರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 (ಪೋಕ್ಸೊ), ಐಪಿಸಿ 354 (ಮಹಿಳೆಯರ ಮೇಲಿನ ದೌರ್ಜನ್ಯ) ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ನ ಪತ್ನಿ ಮತ್ತು ಮಗಳಿಗೆ ಕಿರುಕುಳ ನೀಡಿದ ಯುವಕರನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.