ನ್ಯೂಸ್ ನಾಟೌಟ್ : ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಈ ಪಟ್ಟಿಗೂ ಮೊದಲು ನ್ಯೂಸ್ ನಾಟೌಟ್ ಸೋಮವಾರ ಪ್ರಕಟಿಸಿದ್ದ ಅಭ್ಯರ್ಥಿಯ ಆಯ್ಕೆಯ ವರದಿ ನಿಜವಾಗಿದೆ.
ಪುತ್ತೂರಿನಿಂದ ಆಶಾ ತಿಮ್ಮಪ್ಪ ಗೌಡ ಹಾಗೂ ಸುಳ್ಯದಿಂದ ಭಾಗೀರಥಿ ಮುರುಳ್ಯ ಆಯ್ಕೆ ಬಹುತೇಕ ಖಚಿತವಾಗಿದೆ ಎಂದು ವರದಿಯನ್ನು ಪ್ರಕಟಿಸಿದ್ದೆವು. ನ್ಯೂಸ್ ನಾಟೌಟ್ ಪ್ರಕಟಿಸಿದ್ದ ಈ ವಿಶೇಷ ವರದಿಯನ್ನು ಸಾವಿರಾರು ಸಂಖ್ಯೆಯಲ್ಲಿ ಓದುಗರು ಓದಿದ್ದರು. ಮಹಿಳೆ ಜತೆಗಿನ ಅಕ್ರಮ ಸಂಬಂಧದಿಂದ ಹಾಲಿ ಶಾಸಕರಾಗಿದ್ದ ಸಂಜೀವ ಮಠಂದೂರು ಅವರಿಗೆ ಟಿಕೇಟ್ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿತ್ತು. ಜತೆಗೆ ಸುಳ್ಯ ತಾಲೂಕಿನಲ್ಲಿ ಅಂಗಾರರ ವಿರುದ್ಧ ಮತದಾನ ಬಹಿಷ್ಕಾರದ ಕೂಗು ಕೇಳಿ ಬಂದಿದ್ದರಿಂದ ಸೀಟು ಸಿಗುವುದು ಅನುಮಾನ ಎನ್ನಲಾಗಿತ್ತು. ಹೀಗಾಗಿ ಎರಡೂ ಕ್ಷೇತ್ರದಲ್ಲೂ ಹೊಸ ಮುಖಗಳಿಗೆ ಅವಕಾಶ ಸಿಗಬಹುದು ಎಂದು ನ್ಯೂಸ್ ನಾಟೌಟ್ ವರದಿಯಲ್ಲಿ ವಿಶ್ಲೇಷಿಸಲಾಗಿತ್ತು.