ನ್ಯೂಸ್ ನಾಟೌಟ್:ಮಾಜಿ ಸಚಿವೆ ಉಮಾಶ್ರೀಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ತೇರದಾಳ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಸ್ವಾಮೀಜಿಗಳು ಎಂಟ್ರಿಯಾಗಿದ್ದಾರೆ.ಸ್ವಾಮೀಜಿಗಳಾದ ಅಭಿನವ ರೇವಣ ಸಿದ್ದೇಶ್ವರ ಶ್ರೀ, ಮೃತ್ಯುಂಜಯ ಶ್ರೀ, ಪಂಡಿತ ಪಟ್ಟಣ್ ಶ್ರೀ, ಮಲ್ಲಪ್ಪ ಬಾವಿಕಟ್ಟಿ ಹಾಗೂ ಚಂದ್ರಶೇಖರ ಶಿವಪೂಜಿ ಶ್ರೀಗಳು ಒತ್ತಾಯಿಸಿದ್ದಾರೆ. ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸ್ವಾಮೀಜಿಗಳು, ಡಾ.ಮಲ್ಲೇಶಪ್ಪ ಎಸ್.ದಡ್ಡೆನವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ತೇರದಾಳದಲ್ಲಿ 60 ಸಾವಿರ ಲಿಂಗಾಯತ ನೇಕಾರರಿದ್ದಾರೆ. ಹಿಂದಿನಿಂದಲೂ ಮಲ್ಲೇಶಪ್ಪ ದಡ್ಡೆನವರ ಕುಟುಂಬ ಜೊತೆಗಿದೆ. ಹಾಗಾಗಿ ಡಾ.ಮಲ್ಲೇಶಪ್ಪಗೆ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಗೆಲ್ಲಬಹುದು. ಉಮಾಶ್ರೀಗೆ ಟಿಕೆಟ್ ನೀಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಉಮಾಶ್ರೀ ಈಗಾಗಲೇ ಗೆದ್ದು ಸಚಿವರಾಗಿದ್ದವರು. ಈಗ ಯುವಕ ಮಲ್ಲೇಶಪ್ಪಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.