ಕರಾವಳಿ

ಕರಾವಳಿಯ ಪ್ರವಾಸಿತಾಣಗಳಿಗೆ ಪ್ರವಾಸಿಗರ ದಂಡು, ರಜೆಯಲ್ಲಿ ಮಜಾ ಮಾಡುತ್ತಿರುವ ಚಿಣ್ಣರು

ನ್ಯೂಸ್ ನಾಟೌಟ್ :ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರಸಾಸಿಗರ ದಂಡೇ ಹರಿದು ಬರುತ್ತಿದೆ.ಶಾಲಾ ಮಕ್ಕಳಿಗೆ ರಜೆ ಹಿನ್ನಲೆಯಲ್ಲಿ ಹೆಚ್ಚಾಗಿ ಬೀಚ್ ಗಳಲ್ಲಿ ಕುಟುಂಬಸಮೇತರಾಗಿ ಬಂದು ಸಮಯವನ್ನು ಕಳೆಯುತ್ತಿದ್ದಾರೆ.

ಎಪ್ರಿಲ್‌ ತಿಂಗಳೆಂದ್ರೆ ಮಕ್ಕಳಿಗೆ ರಜೆಯ ಮಜಾ,ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಶಾಲಾ ಮಕ್ಕಳಿಗೆ ರಜೆ ಇರುವುದರಿಂದ ಬಹುತೇಕರು ಕುಟುಂಬ ಪ್ರವಾಸವನ್ನು ಇದೇ ತಿಂಗಳಲ್ಲಿ ನಿಗದಿ ಮಾಡಿಕೊಳ್ಳುತ್ತಾರೆ. ಕರಾವಳಿ ಧಾರ್ಮಿಕ ಕೇಂದ್ರಗಳಲ್ಲಿ ವಾರಾಂತ್ಯ ದಲ್ಲಿ ಸರತಿ ಸಾಲು ಕಾಣಸಿಗುತ್ತಿದೆ. ಬೀಚ್‌ಗಳಲ್ಲಿ ಸೂರ್ಯಾಸ್ತದ ಬಳಿಕವೂ ಪ್ರವಾಸಿಗರು ಕಡಿಮೆಯಾಗುತ್ತಿಲ್ಲ ಎನ್ನುವುದು ವಿಶೇಷ. ಇನ್ನು ಪ್ರವಾಸಿ ಸ್ಥಳಗಳ ಸುತ್ತಲು ಇರುವ ಹೊಟೇಲ್‌, ರೂಮ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ.ಮಕ್ಕಳಂತು ಈ ಅವಕಾಶವನ್ನು ಚೆನ್ನಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.ಚಿಣ್ಣರಿಗೂ ಇದೊಂದು ವಿಶೇಷ ಅನುಭವವೂ ಹೌದು.ಹೀಗಾಗಿ ಕುಟುಂಬ ಸಮೇತರಾಗಿ ಬಂದರೆ ಮಕ್ಕಳೊಂದಿಗೆ ಕುಟುಂಬದವರು ಎಂಜಾಯ್ ಮಾಡಬಹುದಾಗಿದೆ.ಇಲ್ಲಿ ಯಾವುದೇ ಚಿಂತೆಯಿಲ್ಲದೇ ಕಾಲ ಕಳೆಯಲು ಸೂಕ್ತ ಜಾಗವೆಂದೇ ಹೇಳಬಹುದು.

ಶ್ರೀ ಕೃಷ್ಣಮಠ, ಮಲ್ಪೆ ಬೀಚ್‌, ಸೈಂಟ್‌ ಮೇರಿಸ್‌ ಐಲ್ಯಾಂಡ್‌, ಮರವಂತೆ ಬೀಚ್‌, ಸೋಮೇಶ್ವರ ಬೀಚ್‌, ಕೊಲ್ಲೂರು ದೇಗುಲ, ಕಾಪು ದೀಪಸ್ತಂಭ, ಕಾರ್ಕಳದ ಗೋಮಟೇಶ್ವರ ಬೆಟ್ಟ, ಪರಶುರಾಮ ಪ್ರತಿಮೆ, ಕಟೀಲು, ಕದ್ರಿ ದೇಗುಲ, ಪಣಂಬೂರು ಬೀಚ್‌, ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾ ಗಣಪತಿ ದೇಗುಲ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ ನೋಡಲು ಅನೇಕರು ಬರುತ್ತಿದ್ದಾರೆ. ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಿಗರ ಜತೆಗೆ ಸ್ಥಳೀಯರೂ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯವೆಂಬಂತಿದೆ.

Related posts

ಕಸ ಎಸೆದವರ ಜನ್ಮ ಜಾಲಾಡಿ ದಂಡ ವಿಧಿಸಿದ ಐವರ್ನಾಡು ಮಾದರಿ ಪಂಚಾಯತ್..!

ಪ್ರಧಾನಿ ಮೋದಿ ಪ್ರೇರಣೆಯಿಂದ ‘ಗಾಂಧೀಜಿ 150- ಸ್ವಚ್ಛತೆಗೆ ಸ್ವಲ್ಪ ಹೊತ್ತು’ ಅಭಿಯಾನ ಕಾರ್ಯಕ್ರಮ

ಪುತ್ತೂರು: ತಡರಾತ್ರಿ ಕಲ್ಲೇಗ ಟೈಗರ್ಸ್ ಹುಲಿ ಕುಣಿತ ತಂಡದ ನಾಯಕನ ಕೊಚ್ಚಿ ಕೊಲೆ..! ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು