ನ್ಯೂಸ್ ನಾಟೌಟ್ : ನವೆಂಬರ್ನಲ್ಲಿ ಅಮೆರಿಕದ ಟೆಕ್ಸಾಸ್ನಲ್ಲಿ ನಾಪತ್ತೆಯಾಗಿರುವ 6 ವರ್ಷದ ಬುದ್ಧಿಮಾಂದ್ಯ ಮಗುವನ್ನು ಅಮೇರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಸ್ತುತ ಆ ಮಗು ಬದುಕಿದೆ ಅನ್ನುವುದರಲ್ಲಿ ನಂಬಿಕೆಯಿಲ್ಲ, ಅದರ ಶವಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಹೀಗಾಗಿ ಪರಾರಿಯಾಗಿರುವ ತಾಯಿ ಸಿಂಡಿ ರೋಡ್ರಿಗಸ್ ಸಿಂಗ್, ತಂದೆ ಅರ್ಷದೀಪ್ ಸಿಂಗ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದೇವೆ, ಮಗುವನ್ನು ಸಾಕಲು ಆಗದೆ ಅವರು ಕೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಅಮೆರಿಕದ ಎವರ್ಮನ್ ಪೊಲೀಸರು ಹೇಳಿದ್ದಾರೆ.
ಬುದ್ಧಿಮಾಂದ್ಯ ಬಾಲಕ ನೋಯೆಲ್ ರೋಡ್ರಿಗಸ್ ಅಲ್ವಾರೆಜ್ ವಿಶೇಷ ಕಾಳಜಿ ಅಗತ್ಯವಿದ್ದ ಬಾಲಕ. ಆತ ನಾಪತ್ತೆಯಾದ ಮೇಲೆ ತಂದೆ ತಾಯಿಯೂ ಅಮೆರಿಕವನ್ನು ತೊರೆದಿದ್ದಾರೆ ಎಂದು ಅಮೇರಿಕದ ಸ್ಥಳೀಯ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.