ನ್ಯೂಸ್ ನಾಟೌಟ್: 49 ವರ್ಷದ ತಂಗಿಯನ್ನು ಆಸ್ತಿಗಾಗಿ ಬಾಡಿಗೆ ಹಂತಕರ ನೆರವಿನಿಂದ ಕೊಂದಿದ್ದಕ್ಕಾಗಿ ಆಂದ್ರದ ಪ್ರಕಾಶಂ ಹಳ್ಳಿಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕನಿಗಿರಿ ನಿವಾಸಿ ಕೆ.ಶ್ರೀನಿವಾಸುಲು ಅವರು ರಿಯಲ್ ಎಸ್ಟೇಟ್ ಮತ್ತು ಹಾಲು ವ್ಯವಹಾರ ನಡೆಸುತ್ತಿದ್ದರು. ಅವರ ಮೂರು ಮದುವೆಗಳು ಮುರಿದು ಬಿದ್ದಿದ್ದು, ವ್ಯವಹಾರದಲ್ಲಿ 50 ಲಕ್ಷ ನಷ್ಟ ಉಂಟಾಗಿತ್ತು. ಶ್ರೀನಿವಾಸುಲು ಕನಿಗಿರಿ ಪಟ್ಟಣದ ಕೊತ್ತಪೇಟ ನಿವಾಸಿ ತನ್ನ ಸಹೋದರಿ ಓಲೇಟಿ ಸುಶೀಲಾ (43) ಎಂಬಾಕೆಯನ್ನು ಸಾಲದ ಹೊರೆಯಿಂದ ಮುಕ್ತಿಗೊಳಿಸುವಂತೆ ಒತ್ತಾಯಿಸುತ್ತಿದ್ದನು.
ಕಾರಣ ಸುಶೀಲಾ ಭಿನ್ನಾಭಿಪ್ರಾಯದಿಂದಾಗಿ ಗಂಡನಿಂದ ವಿಚ್ಛೇದನ ಪಡೆದು ತವರು ಮನೆಯಲ್ಲೇ ಕಳೆದ ಏಳು ವರ್ಷಗಳಿಂದ ಪೋಷಕರೊಂದಿಗೆ ಕನಿಗಿರಿಯಲ್ಲಿ ನೆಲೆಸಿದ್ದರು. ಈ ವೇಳೆ ಆಕೆಯ ತಾಯಿ ತನ್ನ ಆಸ್ತಿಯನ್ನು ಸುಶೀಲಾ ಹೆಸರಿಗೆ ವರ್ಗಾಯಿಸಿದ್ದರು.
ಆಕೆ ಸಹೋದರ ಆಸ್ತಿ ಕೇಳಿದಾಗ ನೀಡಲು ನಿರಾಕರಿಸಿದ್ದಳು, ಹೀಗಾಗಿ ಮೂರು ತಿಂಗಳ ಹಿಂದೆಯೇ ವಿಜಯವಾಡದ ಮೊಹಮ್ಮದ್ ಕರೀಮುಲ್ಲಾ (42) ಮತ್ತು ಕನಿಗಿರಿ ಪಟ್ಟಣದ ಬಿ. ಲಲಿತಾ (36) ಎಂಬ ಇಬ್ಬರಿಗೆ ಕೊಲೆಗೆ 10 ಲಕ್ಷ ನೀಡುವುದಾಗಿ ಹೇಳಿ ಸಹೋದರಿಯನ್ನು ಕೊಲ್ಲಲು ಸುಫಾರಿ ನೀಡಿದ್ದರು ಎಂಬ ಮಾಹಿತಿಯನ್ನು ಜಿಲ್ಲಾ ಎಸ್ಪಿ ಮಲಿಕಾ ಗರ್ಗ್ ತಿಳಿಸಿದ್ದಾರೆ.
ಆತ ಕೊಲೆಗಾರರಿಗೆ1,10,000 ಮುಂಗಡವಾಗಿ ಪಾವತಿಸಿದ್ದ ಎಂದು ಹೇಳಲಾಗಿದೆ. ಕೊಲೆ ಮಾಡಲು ಕರೀಮುಲ್ಲಾ ಮತ್ತು ಬಾಲಾಪರಾಧಿಯೊಬ್ಬರು ಮಂಗಳವಾರ, ಏಪ್ರಿಲ್ 4 ರಂದು ಸುಶೀಲಾ ಅವರ ನಿವಾಸಕ್ಕೆ ಬಾಡಿಗೆಗೆ ವಸತಿ ಕೋರಿ ಬಂದಿದ್ದರು. ಆಕೆ ಕಾಣಿಸಿಕೊಂಡಾಗ ಆಕೆಗೆ ಚಾಕುವಿನಿಂದ ಇರಿದು ಸುತ್ತಿಗೆಯಿಂದ ಹೊಡೆದು ಸ್ಥಳದಲ್ಲೇ ಕೊಂದಿದ್ದಾರೆ ಎನ್ನಲಾಗಿದೆ.
ನಂತರ ಇಬ್ಬರೂ ತಮ್ಮ ಸಹಚರರಾದ ಲಲಿತಾ ಅವರ ಮನೆಗೆ ತೆರಳಿ ಶ್ರೀನಿವಾಸಲು ಬಾಕಿ ಮೊತ್ತವನ್ನು ಪಡೆಯಲು ಕಾಯುತ್ತಿದ್ದರು. ಆದರೆ ಆತ ಬಾರದಿದ್ದಾಗ ಅದೇ ರಾತ್ರಿ ಆರೋಪಿಗಳು ಊರು ಬಿಟ್ಟರು’ ಎಂದು ಎಸ್ಪಿ ತಿಳಿಸಿದ್ದಾರೆ.
ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ಕರೀಮುಲ್ಲಾ ಮತ್ತು ಬಾಲಾಪರಾಧಿಯನ್ನು ಪೊದಿಲಿ–ಕನಿಗಿರಿ ರಸ್ತೆಯಲ್ಲಿರುವ ತಂಬಾಕು ಮಂಡಳಿ ಕಚೇರಿ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಾಲಾಪರಾಧಿಯು ತಪ್ಪೊಪ್ಪಿಕೊಂಡಿದ್ದು ಸಂಚುಕೋರರಾದ ಶ್ರೀನಿವಾಸಲು ಮತ್ತು ಲಲಿತಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.