ನ್ಯೂಸ್ ನಾಟೌಟ್ : ಜೀವನದಲ್ಲಿ ವಿವಾಹವನ್ನೋದು ಒಮ್ಮೆಯೇ ಬರೋದು ಅಂತ ಹೇಳ್ತಾರೆ.ಇನ್ನು ಕೆಲವರು ಎರಡು- ಮೂರು ಮದುವೆನೂ ಆಗ್ತಾರೆ.ಆದರೆ ಒಬ್ಬನೇ ವ್ಯಕ್ತಿ ಬರೊಬ್ಬರಿ ನೂರು ಮದುವೆಯಾದ್ರೆ! ಅಬ್ಬಾಬ್ಬ , ಒಂದು ಮದುವೆಯಾಗಿಯೇ ಮೈಂಟೇನ್ ಮಾಡೋದು ಕಷ್ಟ. ಅಂಥದ್ರಲ್ಲಿ ನೂರು ಮದುವೆಯಾದವನ ಸ್ಥಿತಿ ಹೇಗಿರಬೇಡ…!
ಹೌದು, ಈ ವ್ಯಕ್ತಿ 100ಕ್ಕೂ ಹೆಚ್ಚು ಮಹಿಳೆಯರನ್ನು ತನ್ನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾನೆ. ಈತ 1949 ಮತ್ತು 1981 ರ ನಡುವೆ ಮಹಿಳೆಯರನ್ನು ವಿವಾಹವಾಗಿದ್ದು,ಇಷ್ಟು ಮದುವೆಗಳನ್ನು ಮಾಡಿಕೊಂಡಿದ್ದರೂ ಸಹ ಯಾರೊಬ್ಬರಿಗೆ ವಿಚ್ಛೇದನ ನೀಡಿಲ್ಲ ಅನ್ನೋದು ವಿಶೇಷ. ಹೀಗಾಗಿ ಈತ ಗರಿಷ್ಠ ಸಂಖ್ಯೆಯ ವಿವಾಹಗಳ ದಾಖಲೆಯನ್ನು ಮುರಿದಿದ್ದಾನೆ!
ಈ ವಿಡಿಯೋವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಈ ವ್ಯಕ್ತಿಯ ಹೆಸರು ಜಿಯೋವಾನಿ ವಿಗ್ಲಿಯೊಟೊ. ಇದು ಆತನ ನಿಜವಾದ ಹೆಸರಲ್ಲ ಎಂದು ತಿಳಿದು ಬಂದಿದೆ. ಅವನು ತನ್ನ ಕೊನೆಯ ಪತ್ನಿಯೊಂದಿಗಿನ ಮದುವೆಯ ಸಮಯದಲ್ಲಿ ಅದೇ ಹೆಸರನ್ನು ಬಳಸಿದ್ದನು ಎನ್ನಲಾಗಿದೆ.ಈತ 53 ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದಿದ್ದಾನೆ. 1929 ,ಏಪ್ರಿಲ್ ೩ರಂದು ಈತ ಇಟಲಿಯ ಸಿಸಿಲಿಯಲ್ಲಿ ಜನಿಸಿದ್ದನು ಎನ್ನಲಾಗಿದೆ. ಆ ಸಮಯದಲ್ಲಿ ಆತ ತನ್ನ ಹೆಸರನ್ನು ನಿಕೊಲಾಯ್ ಪೆರುಸ್ಕೋವ್ ಎಂದು ಹೇಳಿದ್ದನು. ಆದರೆ ಪ್ರಾಸಿಕ್ಯೂಟರ್ ನಂತರ ಅವರ ನಿಜವಾದ ಹೆಸರು ಫ್ರೆಡ್ ಜಿಪ್ ಮತ್ತು ಆತ ಏಪ್ರಿಲ್ 3, 1936 ರಂದು ನ್ಯೂಯಾರ್ಕ್ನಲ್ಲಿ ಜನಿಸಿದ್ದನು ಎಂದು ಹೇಳಿದೆ.
1949 ಮತ್ತು 1981 ರ ನಡುವೆ, ವಿಗ್ಲಿಯೊಟೊ ಎಂಬ ಈ ವ್ಯಕ್ತಿ 105-105 ಮಹಿಳೆಯರನ್ನು ವಿವಾಹವಾಗಿದ್ದಾನೆ ಅನ್ನುವ ಸುದ್ದಿ ಹೊರಬಿದ್ದಿದೆ. ಆಶ್ಚರ್ಯವೆಂದರೆ ಈ ಮಹಿಳೆಯರಿಗೆ ಪರಸ್ಪರ ಪರಿಚಯವಿರಲಿಲ್ಲ. ಅಷ್ಟೇ ಅಲ್ಲ, ವಿಗ್ಲಿಯೊಟೊ ಬಗ್ಗೆಯೂ ಅವರಿಗೆ ಹೆಚ್ಚು ಗೊತ್ತಿರಲಿಲ್ಲ. ಮಾಹಿತಿಯ ಪ್ರಕಾರ, ಈ ವ್ಯಕ್ತಿ 14 ದೇಶಗಳು ಮತ್ತು ಅಮೆರಿಕದ 27 ವಿವಿಧ ರಾಜ್ಯಗಳಲ್ಲಿ ಮದುವೆಗಳನ್ನು ಮಾಡಿಕೊಂಡಿದ್ದಾನೆ ಎಂಬ ಸ್ಪೋಟಕ ವಿಷಯ ಹೊರಬಿದ್ದಿದೆ. ಈ ಮಹಿಳೆಯರಿಗೆ ನಕಲಿ ಗುರುತಿನ ಚೀಟಿ ನೀಡಿ ಅವರನ್ನು ಬಲೆಗೆ ಬೀಳಿಸುತ್ತಿದ್ದ ಎನ್ನುವ ಅಂಶ ಬಯಲಾಗಿದೆ.