ನ್ಯೂಸ್ ನಾಟೌಟ್: ಹೆಲಿಕಾಪ್ಟರ್ ಓಡಿಸುವ ಪೈಲಟ್ ತನ್ನ ಬೆನ್ನ ಹಿಂದೆಯೇ ಕಾಳಿಂಗಸರ್ಪ ತಲೆ ಹಾಕಿದ್ದನ್ನು ಆಶ್ಚರ್ಯಗೊಂಡು ಭಯ-ಭೀತರಾಗಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಗುರುವಾರ ನಡೆದಿದೆ. ಹಾವು ಇರುವುದು ಖಾತ್ರಿಯಾದ ಬಳಿಕ ಏನು ಅಪಾಯವಾಗದಂತೆ ಪೈಲಟ್ ರುಡಾಲ್ಫ್ ಎರಾಸ್ಮಸ್ ಪರಿಸ್ಥಿತಿಯನ್ನು ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದ.ಆಫ್ರಿಕಾದ ವೂರ್ಸೆಸ್ಟರ್ನಿಂದ ನೆಲ್ಸ್ ಪ್ರುಟ್ಗೆ 4 ಮಂದಿಯಿದ್ದ ಸಣ್ಣ ವಿಮಾನವನ್ನು ರುಡಾಲ್ಫ್ ಚಾಲನೆ ಮಾಡುತ್ತಿದ್ದರು. ಅವರಿಗೆ ತಾವು ಆಸನದೊಳಗೇ ಕೂತು ಸ್ವಲ್ಪ ಹೊತ್ತು ಆದಾಗ ಬೆನ್ನಹಿಂದೆ ತಣ್ಣಗಾಗಲು ಆರಂಭವಾಗಿದೆ. ತಿರುಗಿ ನೋಡಿದಾಗ ಕಾಳಿಂಗ ಸರ್ಪದ ಕಾಣುತ್ತದೆ. ಕೂಡಲೇ ಹೆಲಿಕಾಪ್ಟರ್ನೊಳಕ್ಕೆ ಹಾವಿದೆ, ಸದ್ಯದಲ್ಲೇ ಭೂಸ್ಪರ್ಶ ಮಾಡಲಾಗುತ್ತದೆ. ಧೈರ್ಯವಾಗಿ ಕುಳಿತುಕೊಳ್ಳಿ ಎಂದು ಸಹ-ಪ್ರಯಾಣಿಕರಿಗೆ ತಿಳಿಸುತ್ತಾರೆ.
ಅಲ್ಲೇ ಸನಿಹದಲ್ಲಿದ್ದ ವೆಲ್ಕಾಮ್ ಎಂಬ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಎಲ್ಲರು ಇಳಿದ ಬಳಿಕ ಪೈಲಟ್ ಆಸನದ ಕೆಳಗೆ ನೋಡಿದಾಗ ಕಾಳಿಂಗ ಸರ್ಪ ಸುರುಳಿ ಸುತ್ತಿಕೊಂಡು ಮಲಗಿರುವುದು ಗಮನಕ್ಕೆ ಬಂದಿದೆ ಎಂದು ವರದಿ ತಿಳಿಸಿದೆ.