ನ್ಯೂಸ್ ನಾಟೌಟ್: ಇಸ್ರೇಲ್ ತನ್ನ ನೆಲದ ಮೇಲೆ ದಾಳಿ ನಡೆಸಿ ಉಗ್ರರನ್ನು ಸರ್ವನಾಶ ಮಾಡದೆ, ಮತ್ತೆ ಉಗ್ರರ ನೆಲೆಗಳನ್ನೇ ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿದ ಘಟನೆ ಮಾರ್ಚ್ ೭ ರಂದು ವರದಿಯಾಗಿದೆ.
ಪ್ಯಾಲೆಸ್ಟೀನ್ ಸೇರಿದಂತೆ ಗಾಜಾ ಪಟ್ಟಿ ಹಾಗೂ ಲೆಬನಾನ್ ಗಡಿ ಭಾಗದಲ್ಲಿ ಉಗ್ರರು ಅಡಗಿರುವ ಮಾಹಿತಿ ತಿಳಿದ ಕಡೆ ಗುರಿಯಿಟ್ಟು ರಾಕೆಟ್ ಉಡಾಯಿಸಲಾಗಿದೆ. ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕೃತವಾಗಿ ಹೊರಬಿದ್ದಿಲ್ಲ.
ಕೆಲದಿನದಿಂದ ಇಸ್ರೇಲ್ ಗಡಿಯಲ್ಲಿ ಅದರಲ್ಲೂ ಜೆರುಸಲೇಂ ಓಲ್ಡ್ ಸಿಟಿಯ ಭಾಗದಲ್ಲಿ ಪ್ರಾರ್ಥನೆ ನಡೆಸುತ್ತಿದ್ದವರ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದೆ ಎಂಬ ಮಾಹಿತಿ ಹೊರಬಿದ್ದ ನಂತರ ಹಿಂಸಾಚಾರ ತೀವ್ರವಾಗಿದೆ. ಇದೇ ಸಮಯವನ್ನು ತಮ್ಮ ಲಾಭಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದ್ದ ಉಗ್ರರಿಗೆ ಇಸ್ರೇಲ್ ಸೇನೆ ಬಿಸಿ ಮುಟ್ಟಿಸಿದೆ.
ಒಂದು ಕಡೆ ಇಸ್ರೇಲ್ ನೆಲಕ್ಕೆ ರಾಕೆಟ್ ಹಾರಿಸಿ ತಣ್ಣಗಿದ್ದ ಉಗ್ರರನ್ನು ಹುಡುಕಿ, ಹುಡುಕಿ ಕೊಲ್ಲಲಾಗುತ್ತಿದೆ. ಹೀಗೆ ಹತ್ತಾರು ರಾಕೆಟ್ಗಳನ್ನು ಹಾರಿಸಿ ಉಗ್ರರು ಅಡಗಿರುವ ಜಾಗಗಳಲ್ಲಿ ಬ್ಲಾಸ್ಟ್ ಮಾಡಿಸಲಾಗಿದೆ.
ಇಲ್ಲೊಂದು ದಾಳಿಯ ವಿಡಿಯೋ ವೈರಲ್ ಆಗುತ್ತಿದ್ದು, ಪತ್ರಕರ್ತನ ಕರ್ತವ್ಯ ಪ್ರಜ್ಞೆ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತನ್ನ ಎದುರಲ್ಲೇ ಸಾಲು ಸಾಲು ಮಿಸೈಲ್ಗಳು ಬಂದು ಅಪ್ಪಳಿಸುತ್ತಿದ್ದರೂ ಸ್ವಲ್ಪವೂ ಭಯಪಡದೆ, ನೇರವಾಗಿ ದಾಳಿಯ ಚಿತ್ರೀಕರಣ ಮಾಡಿದ್ದಾನೆ.