ನ್ಯೂಸ್ ನಾಟೌಟ್ : ಕರಾವಳಿ ಅಂದ್ರೆ ಕಲೆ ಸಂಸ್ಕೃತಿಗಳ ನೆಲೆವೀಡು. ಯಕ್ಷಗಾನ ಪ್ರಿಯರ ತವರೂರು. ಅಂತಹ ಕರಾವಳಿಯಲ್ಲಿ ಯಕ್ಷಗಾನಕ್ಕೆ ಮೊದಲ ಪ್ರಾಧಾನ್ಯತೆ. ಯಕ್ಷಗಾನದಲ್ಲಿ ಹಾಸ್ಯ, ಗಂಭೀರ ಪ್ರಕಾರಗಳ ರಸದೌತಣವಿದೆ. ಇಲ್ಲೊಬ್ಬರುಇ ಬಡಗುತಿಟ್ಟಿನ ಕಲಾವಿದರು ಮತದಾನದ ಮಹತ್ವವನ್ನು ಯಕ್ಷಗಾನ ವೇಷಧಾರಿಯಾಗಿ ರಂಗಸ್ಥಳದಲ್ಲಿಸಾರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೇಶದ ಪ್ರಜೆ ಮತದಾನ ಏಕೆ ಮಾಡಬೇಕು ಅನ್ನುವುದನ್ನು ವೇಷಧಾರಿ ಕಲಾವಿದ ವಿವರಿಸುತ್ತಾ ಹೋಗಿದ್ದಾರೆ. ಈ ಪ್ರಕಾರವಾಗಿ ನೋಡುವುದಾದರೆ ಅವರು ಹೇಳಿರುವ ಮಾತಿನ ಪ್ರಕಾರ, ಮತದಾನ ಮಾಡುವುದರಿಂದ ದೇಶದ ಅಭಿವೃದ್ಧಿಯಾಗುತ್ತದೆ, ಉತ್ತಮ ಸಮಾಜದ ನಿರ್ಮಾಣಕ್ಕೆ ಮತದಾನದ ಅಗತ್ಯವಿದೆ.
ಒಳ್ಳೆಯ ಶಿಕ್ಷಣ, ಭವಿಷ್ಯ, ಆರೋಗ್ಯ, ಸ್ಥಿರತೆಗಾಗಿ ಮತದಾನ ಮಾಡಲೇಬೇಕು ಅನ್ನುವ ಸಂದೇಶವನ್ನು ವಿಡಿಯೋದಲ್ಲಿ ನೀಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.