ನ್ಯೂಸ್ ನಾಟೌಟ್: ಅಲ್ಜೀರಿಯಾ ಮಸೀದಿಯೊಂದರಲ್ಲಿ ರಂಜಾನ್ ಸಮಯದ ಇಮಾಮ್ ಪ್ರಾರ್ಥನೆಯ ವೇಳೆ ಬೆಕ್ಕೊಂದು ಪ್ರಾರ್ಥನೆಯ ನೇತೃತ್ವ ವಹಿಸಿದ್ದ ವ್ಯಕ್ತಿಯ ಮೇಲೆ ಹತ್ತಿದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಶೇಖ್ ವಾಲಿದ್ ಮೆಹ್ಸಾಸ್ ಅವರ ಅಧಿಕೃತ ಫೇಸ್ಬುಕ್ ಪುಟದಿಂದ ಪೋಸ್ಟ್ ಮಾಡಲಾದ ವೈರಲ್ ವೀಡಿಯೊ, ಪವಿತ್ರವಾದ ರಂಜಾನ್ ತಿಂಗಳಿನಲ್ಲಿ ಆಚರಿಸಲಾಗುವ ವಿಶೇಷ ರಾತ್ರಿಯ ವಾಚನ – ಪ್ರಾರ್ಥನೆಯ ಮಧ್ಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಹತ್ತಿ ಪ್ರೀತಿಯಿಂದ ನೇವರಿಸಿ ಬೆಕ್ಕು ಹಾರಿಹೋಗುವ ಕ್ಷಣ ವಿಶೇಷವಾಗಿದೆ.
“ಇದು ದೇವರಿಗೆ ಮಹಿಮೆ. ಪ್ರಾಣಿಗಳು ಸಹ ದೇವರ ಪದಗಳಿಗೆ ಸಂತೋಷ ಪಡುತ್ತವೆ. ತರಾವೀಹ್ ಪ್ರಾರ್ಥನೆಯಲ್ಲಿ ಕುರಾನ್ ಓದುತ್ತಿದ್ದಾರೆ,” ಎಂದು ವಿಡಿಯೋಗೆ ಶೀರ್ಷಿಕೆ ಬರೆಯಲಾಗಿದೆ.