ಅರಂತೋಡು: ಇಲ್ಲಿನ ತೆಕ್ಕಿಲ್ ಹೆಚ್.ಪಿ.ಗ್ಯಾಸ್ ಗೋಡಾನ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ನಡುವಿನಲ್ಲಿ ನೀರು ತುಂಬಿದ ಬೃಹತ್ತಾದ ಗುಂಡಿ ಸೃಷ್ಟಿಯಾಗಿದೆ. ವಾಹನ ಸವಾರರು ಚಾಲನೆ ಮಾಡುವಾಗ ಜಾಗೃತೆ ವಹಿಸದೇ ಹೋದರೆ ಭಾರಿ ಅವಘಡ ಸಂಭವಿಸುವ ಸಾಧ್ಯತೆ. ಇದೀಗ ಆ ಗುಂಡಿಗೆ ಸ್ಥಳೀಯರು ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದಾರೆ. ಇನ್ನಾದರೂ ರಾಜ್ಯ ಹೆದ್ದಾರಿ ಇಲಾಖೆಯವರು ಎಚ್ಚೆತ್ತು ಕ್ರಮ ಕೈಗೊಳ್ಳಬಹುದೇ? ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯ ಮೇಲೆಯೇ ಹರಿಯುತ್ತಿರುವುದರಿಂದ ಇಂತಹ ಗುಂಡಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- +91 73497 60202
- [email protected]
- November 22, 2024 3:11 PM