ನ್ಯೂಸ್ ನಾಟೌಟ್ : 30 ವರ್ಷದ ವ್ಯಕ್ತಿಯೊಬ್ಬ ತನ್ನ ಅತ್ತಿಗೆ ಮತ್ತು ಆಕೆಯ ಇಬ್ಬರು ಅಪ್ರಾಪ್ತ ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ಶವಗಳಿಗೆ ಬೆಂಕಿ ಹಚ್ಚಿದ್ದಾನೆ ಘಟನೆ ಗುರುವಾರ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ.
ಬುಧವಾರ ಸಂಜೆ ಕೊಂಡ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯು ತನ್ನ 25 ವರ್ಷದ ಅತ್ತಿಗೆ ಅನ್ಯ ಪುರುಷರೊಂದಿಗೆ ಅನುಚಿತ ವ್ಯವಹಾರ ಹೊಂದಿದ್ದಾಳೆ ಎಂದು ಅಸಮಾಧಾನ ಹೊಂದಿದ್ದ ತಿಳಿದುಬಂದಿದೆ.
ಆರೋಪಿಯನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷ್ಯಾ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ಆರೋಪಿ ಮಹಿಳೆಯ ಜೊತೆ ಇತರ ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಜಗಳವಾಡಿನು, ಈ ವೇಳೆ ಕೋಪದ ಭರದಲ್ಲಿ ಅವಳನ್ನು ಮತ್ತು ಅವಳ 4 ಮತ್ತು 6 ವರ್ಷದ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಕೊಂಡ್ವಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಮೃತದೇಹಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಕೊಂಧ್ವಾದ ಪಿಸೋಲಿ ಪ್ರದೇಶದಲ್ಲಿ ಮಹಿಳೆಯ ಮನೆಯ ಮುಂಭಾಗದ ತಗಡಿನ ಶೆಡ್ನಲ್ಲಿ ಬೆಡ್ಶೀಟ್ಗಳು ಮತ್ತು ಕಟ್ಟಿಗೆಯನ್ನು ಬಳಸಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.