ನ್ಯೂಸ್ ನಾಟೌಟ್ : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ, ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮೊಹಮ್ಮದ್ ಶಾರಿಕ್ನ ಬಳಿ ಪತ್ತೆಯಾದ ಪೆನ್ ಡ್ರೈವ್ನಲ್ಲಿರುವ ಮಾಹಿತಿಗಳು ಸ್ವತಃ ಎನ್ಐಎ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.
ಸದ್ಯ ಆತನ ಬಳಿಯಲ್ಲಿ 80 ಜಿಬಿ ಸಾಮರ್ಥ್ಯದ ಪೆನ್ ಡ್ರೈವ್ ಸಿಕ್ಕಿದ್ದು,ಬಳಿಕ ಅದನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಅದರಲ್ಲಿರುವ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ.ಈ ಮೂಲಕ ಶಾರಿಕ್ ಮತ್ತು ಆತನ ಟೀಮ್ ಕುರಿತ ಕಂಪ್ಲೀಟ್ ಡಿಟೇಲ್ಸ್ ಲಭ್ಯವಾಗಿದೆ.ಶಾರಿಕ್ ಮತ್ತು ಈತನ ಟೀಮ್ ಯಾರಿಂದ ಪ್ರಚೋದನೆ ಪಡೆಯುತ್ತಿತ್ತು , ಮಾಹಿತಿಗಳನ್ನು ಯಾವ ರೀತಿ ಕಲೆ ಹಾಕುತ್ತಿದ್ರು ಈ ಕುರಿತ ಸ್ಪೋಟಕ ವಿಷಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಪೆನ್ ಡ್ರೈವ್ನಲ್ಲಿ 2017ನೇ ಇಸವಿಯಲ್ಲಿ ತೀರ್ಥಹಳ್ಳಿಯಲ್ಲಿ ಮೌಲ್ವಿಯೊಬ್ಬ ಪ್ರಚೋದನಕಾರಿಯಾಗಿ ಭಾಷಣವನ್ನು ಮಾಡಿರುವಂತಹ ಹಾಗೂ ಪ್ರಚೋದನಾಕಾರಿ ಭಾಷಣಗಳು, ಕಾನೂನು ಸುವ್ಯವಸ್ಥೆ ಹದಗೆಡಿಸಲು ಮಾಡಬೇಕಾಗಿರುವ ಪ್ಲಾನ್ಗಳು ಹಾಗು ಹಿಂದೂ ಮುಖಂಡರು ಮಾತನಾಡಿರುವ ಭಾಷಣದ ತುಣುಕುಗಳೂ ಸಿಕ್ಕಿದೆ ಎಂಬ ಅಂಶ ಬಯಲಾಗಿದೆ. ಇನ್ನು ಮೌಲ್ವಿಯೊಬ್ಬ ಪ್ರಚೋದನಕಾರಿಯಾಗಿ ಭಾಷಣವನ್ನು ಮಾಡಿರುವುದಲ್ಲಿ ಕಾಫಿರರ ವಿರುದ್ಧ ಜಿಹಾದ್ ಕೈಗೊಳ್ಳಿ ಧರ್ಮ ಉಳಿಸಿ ಎಂದೆಲ್ಲಾ ಯುವಕರಿಗೆ ಕರೆ ಕೊಟ್ಟಿದ್ದ.ಇದರಿಂದ ಕೆಲವು ಯುವಕರು ಉಗ್ರವಾದಕ್ಕೆ ತಿರುಗುವಂತೆ ಮಾಡಿತ್ತು ಎಂದು ಆ ಮೌಲ್ವಿಗಾಗಿ ಎನ್ಐಎ ಅಧಿಕಾರಿಗಳು ತೀವ್ರ ಹುಡುಕಾಟವನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.