ನ್ಯೂಸ್ ನಾಟೌಟ್ : ಸಂಭ್ಯಾವ್ಯ ರೈಲು ಅವಘಡವನ್ನು ತಪ್ಪಿಸಿ ನೂರಾರು ಜನರನ್ನು ರಕ್ಷಿಸಿದ ಮಹಿಳೆಯ ಸಾಹಸಗಾಥೆಯ ರೋಚಕ ಘಟನೆಯೊಂದು ಮಂಗಳೂರಿನಿಂದ ವರದಿಯಾಗಿದೆ.ಕಳೆದ 15 ದಿನಗಳ ಹಿಂದೆ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಆ ಮಹಿಳೆಯ ಸಮಯಪ್ರಜ್ಞೆ ಹಾಗು ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.
ಮಾರ್ಚ್ 21.ಮಧ್ಯಾಹ್ನ ೨.೧೦ ಆಗಿರಬಹುದು. ಆ ವೇಳೆ ಮಂಗಳೂರಿನಿಂದ ಮುಂಬಯಿಗೆ ಮತ್ಸ್ವಗಂಧ ರೈಲು ಸಂಚರಿಸುವುದರಲ್ಲಿತ್ತು. ಇದನ್ನು ತತ್ಕ್ಷಣವೇ ಗಮನಿಸಿದ 70 ವರ್ಷ ಪ್ರಾಯದ ಚಂದ್ರಾವತಿ ಅವರು ಮನೆಯಲ್ಲಿದ್ದ ಕೆಂಪು ವಸ್ತ್ರವನ್ನು ತಂದು ರೈಲು ಬರುವ ಸಮಯಕ್ಕೆ ಪ್ರದರ್ಶಿಸಿದರು. ಈ ಮೂಲಕ ಲೋಕೋಪೈಲೆಟ್ ಅವರ ಗಮನ ಸೆಳೆದರು. ಅಪಾಯ ಅರಿತ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯವರು ಸೇರಿ ಮರ ತೆರವು ಮಾಡಿದರು.
ಪಡೀಲ್ – ಜೋಕಟ್ಟೆ ಮಧ್ಯೆಯ ಪಚ್ಚನಾಡಿ ಸಮೀಪ ಮಂದಾರ ದಲ್ಲಿ ಈ ಘಟನೆ ಸಂಭವಿಸಿದ್ದು ಇದೀಗ ಮುನ್ನಲೆಗೆ ಬಂದಿದೆ. ಕುಡುಪು ಆಯರ ಮನೆ ಚಂದ್ರಾವತಿ ಅವರು ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿ ನೂರಾರು ಜನರ ರಕ್ಷಿಸಿ ಎಲ್ಲರ ಗಮನ ಸೆಳೆದಿದ್ದಲ್ಲದೇ,ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.