ನ್ಯೂಸ್ ನಾಟೌಟ್ : ಚೀನಾದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದರೂ ಕೆಲಸ ಮಾಡುವ ಸಾಮರ್ಥ್ಯ ಅಥವಾ ಉತ್ಪಾದಕತ್ವದ ಸಾಮರ್ಥ ಹೊಂದಿದ ಜನ ಸಂಖ್ಯೆಯ ಕೊರತೆಯಿದೆ. ದೇಶದಲ್ಲಿ ವೃದ್ಧರ ಪ್ರಮಾಣ ಏರಿಕೆಯಾಗಿ, ಯುವಕರ ಸಂಖ್ಯೆ ಇಳಿಕೆಯಾಗಿದೆ. ಇದರಿಂದ ಅಲ್ಲಿನ ಆಡಳಿತ ಮಾತ್ರವಲ್ಲ, ಶಿಕ್ಷಣ ಸಂಸ್ಥೆಗಳು ತಲೆಕೆಡಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸುತ್ತಿವೆ.
ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆನ್ನಿಸಿಕೊಂಡಿರುವ ಚೀನದಲ್ಲಿ, ಈಗ ಜನನ ಪ್ರಮಾಣವೇ ಕುಸಿಯುತ್ತಿದೆ. ಇದಕ್ಕಾಗಿ ಫ್ಯಾನ್ ಮೀ ಶೈಕ್ಷಣಿಕ ಸಮೂಹದಡಿಯಲ್ಲಿ ಬರುವ 9 ಕಾಲೇಜುಗಳು ಎ .1ರಿಂದ ಎ .7ರ ವರೆಗೆ ರಜೆಯನ್ನೇ ಘೋಷಿಸಿವೆ. ತಮ್ಮ ವಿದ್ಯಾರ್ಥಿಗಳಿಗೆ ಪ್ರಕೃತಿಯ ಸನಿಹ ಹೋಗಿ, ನಿಮ್ಮ ಜೀವನವನ್ನು ಆನಂದಿಸಿ ಎಂದು ಪರೋಕ್ಷವಾಗಿ ಸೂಚಿಸಿವೆ.
ಈ ಮೂಲಕ ವಿದ್ಯಾರ್ಥಿಗಳು ದೇಶದ ಜನಸಂಖ್ಯೆ ವೃದ್ಧಿಸಲು ಕೊಡುಗೆ ನೀಡಬೇಕೆಂದು ಅದರ ಆಶಯ. ಇದರಿಂದ ಎಷ್ಟು ಉಪಯೋಗವಾಗುತ್ತದೆ ಎಂದು ಕಾದು ನೋಡಬೇಕು. ಇನ್ನು ಸ್ಥಳೀಯ ಕಂಪನಿಗಳು, ಪ್ರಾಂತ್ಯಗಳು, ನಗರಗಳು ತಮ್ಮ ಉದ್ಯೋಗಿಗಳಿಗೆ ವಿವಾಹಕ್ಕೆಂದೇ 1 ತಿಂಗಳು ರಜೆ ನೀಡುತ್ತಿವೆ. ನಗರದ ಹುಡುಗಿಯರು ಹಳ್ಳಿಯ ವಯಸ್ಸಾದ ಹುಡುಗರನ್ನು ವಿವಾಹವಾಗುವಂತೆ ಪ್ರಚೋದಿಸುತ್ತಿವೆ ಎಂದು ವರದಿ ತಿಳಿಸದೆ.