ಜೀವನಶೈಲಿ

ಅಯ್ಯಯ್ಯೋ…ಇದೆಂಥ ಹುಚ್ಚು ಸಾಹಸ,ಎದೆಗೊಬ್ಬಳು-ಬೆನ್ನಿಗೊಬ್ಬಳು ಹುಡುಗಿಯರೊಂದಿಗೆ ಯುವಕನ ತಲೆಬುಡವಿಲ್ಲದ ಸ್ಟಂಟ್

ನ್ಯೂಸ್ ನಾಟೌಟ್ :ಕೆಲವರಿಗೆ ಬೈಕ್ ಸ್ಟಂಟ್ ಮಾಡುವ ಕ್ರೇಜ್ ಇರುತ್ತೆ ನಿಜ. ಆದರೆ ಈ ತರಹದ ಹುಚ್ಚಾಟ ಎಂದಿಗೂ ಇರಬಾರದು.ಇಲ್ಲೊಬ್ಬ ಯುವಕನ ಬೈಕ್ ಸ್ಟಂಟ್ ನೋಡಿದ್ರೆ ನೀವು ನಿಬ್ಬೆರಗಾಗುತ್ತೀರಿ.ಮಾತ್ರವಲ್ಲ ಆತ ಬದುಕಿ ಬಂದದ್ದೇ ಹೆಚ್ಚು ಎಂಬಂತಿದೆ.ಜತೆಗೆ ಇಬ್ಬರು ಹುಡುಗಿಯರನ್ನು ಸೇರಿಸಿ ಈತ ಸ್ಟಂಟ್ ಮಾಡೋದಕ್ಕೆ ಹೊರಟು ಪೇಚಿಗೆ ಸಿಲುಕಿದ್ದಾನೆ.

ವಾಹನ ಸಂಚಾರ ಜಾಸ್ತಿ ಇರುವ ರಸ್ತೆಗಳಲ್ಲೂ ಬೈಕ್​ ವೀಲ್ಹಿಂಗ್, ಅಪಾಯಕಾರಿ ಸಾಹಸಗಳನ್ನು ಮಾಡುವ ಮೂಲಕ ಹುಚ್ಚಾಟ ಆಡುವುದು ಅಕ್ಷಮ್ಯ ಅಪರಾಧ. ವೃತ್ತಿಪರರು ಅಲ್ಲದವರು, ಹೀಗೆ ಬ್ಯುಸಿ ರೋಡ್​​ನಲ್ಲಿ ಬೈಕ್​ ಸ್ಟಂಟ್​ ಮಾಡುವುದು ಅಪರಾಧವಾಗಿದ್ದರೂ ಒಂದಷ್ಟು ಯುವಕರು ಡೋಂಟ್ ಕೇರ್ ಎನ್ನದೇ ಬೈಕ್ ಸಾಹಸ ಮಾಡಿ ಸೋಶಿಯಲ್ ಮೀಡಿಯಾ ಮೂಲಕ ಅಪ್ ಲೋಡ್ ಮಾಡುತ್ತಾರೆ.ಆದರೆ ಮುಂಬಯಿಯ ಈ ಯುವಕ ಇನ್ನೂ ಅತಿರೇಕ ಅನ್ನಿಸುವಂಥ ಸಾಹಸ ಮಾಡಿದ್ದಾನೆ.ಇಬ್ಬರು ಯುವತಿಯರನ್ನು ಬೈಕ್ ಮೇಲೆ ಕೂರಿಸಿಕೊಂಡು, ವ್ಹೀಲಿಂಗ್ ಮಾಡಿದ್ದಾನೆ.

ಆ ಯುವತಿಯರು ಸರಿಯಾಗಿ ಕುಳಿತಿಲ್ಲ. ಹುಡುಗ ಬೈಕ್​ನ ಮಧ್ಯೆ ಕುಳಿತಿದ್ದರೆ, ಒಬ್ಬಳು ಯುವತಿ ಆತನ ಮುಂಭಾಗದಲ್ಲಿ, ಎದೆಗೆ ಅಪ್ಪಿಕೊಂಡು ಕುಳಿತಿದ್ದಾಳೆ. ಇನ್ನೊಬ್ಬಳು ಹಿಂಭಾಗದಲ್ಲಿ ಕುಳಿತಿದ್ದಾಳೆ. ಈ ಯುವಕ ಬೈಕ್​​ನ ಮುಂದಿನ ಚಕ್ರವನ್ನು ಮೇಲಕ್ಕೆತ್ತಿ ರೈಡ್ ಮಾಡಿದ್ದಾನೆ. ಮೂವರೂ ಹೆಲ್ಮೆಟ್ ಧರಿಸಿಲ್ಲ. ಅದೂ ಕೂಡ ನಗರದ ಮಧ್ಯದಲ್ಲಿರುವ ರಸ್ತೆಯಂತೆ ಕಾಣುತ್ತಿದೆ.ಇದು ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದೆ.

@PotholeWarriors Foundation ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಮೊದಲು ಈ ವಿಡಿಯೊ ಶೇರ್ ಆಗಿತ್ತು. ‘ಇದು ನಿಜಕ್ಕೂ ಅಪಾಯಕಾರಿ ಸಾಹಸ’ ಎಂದು ಕ್ಯಾಪ್ಷನ್ ಕೂಡ​ ಬರೆಯಲಾಗಿತ್ತು. ಹಾಗೇ, ಬೈಕ್​ ನಂಬರ್​ (Mh01DH5987)ನ್ನೂ ಕೊಟ್ಟು, ಈತನನ್ನು ಹಿಡಿಯಿರಿ ಎಂದು ಹೇಳಿ ‘ಮುಂಬಯಿ ಟ್ರಾಫಿಕ್ ಪೊಲೀಸ್’ ಟ್ಟಿಟರ್​ ಅಕೌಂಟ್​ನ್ನು ಟ್ಯಾಗ್ ಮಾಡಲಾಗಿತ್ತು. ಬಳಿಕ ವಿಡಿಯೊವನ್ನು ಮುಂಬಯಿ ಸಂಚಾರಿ ಪೊಲೀಸರು ರೀಶೇರ್ ಮಾಡಿಕೊಂಡಿದ್ದು, ‘ಈ ಮೂವರ ವಿರುದ್ಧವೂ ಬಿಕೆಎಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರನ್ನು ಪತ್ತೆ ಹಚ್ಚುವ ಸಂಬಂಧ ತನಿಖೆ ನಡೆಯುತ್ತಿದೆ.

Related posts

India Post GDS Recruitment : 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಿ, ಇಂದು ಕೊನೇ ದಿನ

ಸಚಿವ ಜಮೀರ್‌ ಅಹ್ಮದ್‌ ಆಸ್ಪತ್ರೆಗೆ ದಾಖಲು..! ಐಸಿಯುನಲ್ಲಿ ಚಿಕಿತ್ಸೆ

ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪದವಿ ಪ್ರದಾನ ಕಾರ್ಯಕ್ರಮ ಸಂಪನ್ನ, ಡಾ|ಎಸ್ ಟಿ ಶ್ರೀನಿವಾಸ್ ಮೂರ್ತಿ, ಡಾ ಕೆವಿ ಚಿದಾನಂದ ಸೇರಿದಂತೆ ಗಣ್ಯರು ಭಾಗಿ