ನ್ಯೂಸ್ ನಾಟೌಟ್:ಕೆಲವರು ಸಾಕು ನಾಯಿಯನ್ನು ತುಂಬಾ ಮುದ್ದಾಗಿ ಸಾಕುತ್ತಾರೆ.ಸಾಕು ನಾಯಿಗಳು ಮನೆ ಯಜಮಾನನಿಗೆ ತೋರುವ ಪ್ರೀತಿಗೆ ಬೆಲೆ ಕಟ್ಟೋದಕ್ಕೆ ಅಸಾಧ್ಯ.ಆದರೆ ಇಲ್ಲೊಬ್ಬ ಮುದುಕನಿದ್ದಾನೆ.ಮುಗ್ಧ ನಾಯಿಯನ್ನೇ ಕಾಮದ ದೃಷ್ಟಿಯಲ್ಲಿ ನೋಡುವುದಕ್ಕೆ ಶುರು ಮಾಡಿದ್ದಾನೆ. ಮಾತ್ರವಲ್ಲ ಸಾಕು ನಾಯಿಯ ಮೇಲೆ ೨ ವರ್ಷಗಳ ಕಾಲ ಅತ್ಯಾಚಾರವನ್ನೂ ಎಸಗಿದ್ದಾನೆ.ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಆರೋಪಿಯನ್ನು ರತಿಕಾಂತ್ ಸರ್ದಾರ್ ಎಂದು ಗುರುತಿಸಲಾಗಿದೆ. ಸಮೀಪದ ಮನೆಯಲ್ಲಿ ನಾಯಿ ಕೂಗುತ್ತಿದ್ದಂತೆ ಸ್ಥಳೀಯರು ಸರ್ದಾರ್ ಅನ್ನು ಅಮಲೇರಿದ ಮತ್ತು ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಗುರುತಿಸಿದ್ದಾರೆ. ಅದಾದ ಬಳಿಕ ರತಿಕಾಂತ್ ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಕೃತ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿಯೂ ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ, ಸರ್ದಾರ್ ಸುಮಾರು 2 ವರ್ಷಗಳಿಂದ ತನ್ನ ಸಾಕು ನಾಯಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಎನ್ನುವ ಸ್ಪೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾನೆ. ನಾಯಿಯನ್ನು ಬಿಡುಗಡೆ ಮಾಡುವಂತೆ ಮತ್ತು ಅಂತಹ ಕೃತ್ಯದಿಂದ ದೂರವಿರುವಂತೆ ಪದೇ ಪದೇ ಕೇಳಿಕೊಂಡಿದ್ದೆವು. ಆದರೆ ಆತ ಮಾತನ್ನು ಕೇಳಲು ನಿರಾಕರಿಸುತ್ತಿದ್ದ ಎಂದು ಹೇಳಿದ್ದಾನೆ.ಘಟನೆಗೆ ಸಂಬಂಧಿಸಿದಂತೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯರು ಹರಿಬಿಟ್ಟಿದ್ದು,ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರೇಮಿಗಳ ಸಂಘಟನೆಯ ಸದಸ್ಯರೊಬ್ಬರು ಸೋನಾರ್ಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರತಿಕಾಂತ್ ಸರ್ದಾರ್ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿದ ಪ್ರಾಣಿ ಸಂರಕ್ಷಣಾ ಸಂಘಟನೆಯ ಸದಸ್ಯರು, ಇದು ಒಂದು ವರ್ಷದ ಹಳೆಯ ವಿಡಿಯೋ.ಆದಾಗ್ಯೂ,ಅವರಿಗೆ ಪ್ರಾಣಿ ಸಂರಕ್ಷಣಾ ಕಾಯಿದೆಗಳ ಬಗ್ಗೆ ತಿಳಿಯದೇ ನಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ತಿಳಿಸಿದರು.