ನ್ಯೂಸ್ ನಾಟೌಟ್: ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ ಬೆನ್ನಲ್ಲೇ ಮಗಳು ಮದುವೆಯಾಗಿ ಪ್ರತ್ಯಕ್ಷವಾದ ಘಟನೆ ಗುತ್ತಿಗಾರು ನಿಂದ ವರದಿಯಾಗಿದೆ.
ಮಗಳು ನಾಪತ್ತೆಯಾಗಿದ್ದು ಹುಡುಕಿಕೊಡಬೇಕೆಂದು ಯುವತಿಯ ತಾಯಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಇನ್ನೇನು ತನಿಖೆ ಶುರು ಮಾಡಬೇಕು ಅನ್ನುವಷ್ಟರಲ್ಲಿ ಮಗಳು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆಕೆ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯನನ್ನು ಮದುವೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮನೆಯವರ ವಿರೋಧ ಇದ್ದುದರಿಂದ ಇಬ್ಬರಿಗೆ ನದುವೆಯಾಗುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಗುಟ್ಟಾಗಿ ಹೋಗಿ ಇಬ್ಬರು ಗೃಹಸ್ಥಾಶ್ರಮಕ್ಕೆ ಕಾಲಿರಿಸಿ ಮನೆ ಮುಂದೆ ಬಂದಿದ್ದಾರೆ.