ನ್ಯೂಸ್ ನಾಟೌಟ್: ಓದು ಎಂದು ಬುದ್ಧಿ ವಾದ ಹೇಳಿದ ಅಪ್ಪನ ಮಾತಿಗೆ ಮನನೊಂದು 9 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ತಿರುವಳ್ಳೂರ್ ನಲ್ಲಿ ಮಾ.27 ನಡೆದಿದೆ.
ಮನೆಯಲ್ಲಿ ಆಟವಾಡುತ್ತಿದ್ದ ಮಗಳಿಗೆ ತಂದೆ ಕೃಷ್ಣಮೂರ್ತಿ ಸ್ವಲ್ಪ ಓದು ಎಂದು ಬುದ್ದಿವಾದ ಹೇಳಿದ್ದರು. ಆಟ ಸಾಕು ಓದುದರ ಬಗ್ಗೆ ಗಮನಹರಿಸಬೇಕು, ಮನೆಗೆ ಹೋಗಿ ಓದು ಎಂದು ಮಗಳ ಕೈಯಲ್ಲಿ ಕೀಕೊಟ್ಟು ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಕೆಲಸ ಮುಗಿಸಿ 8:15ರ ಹೊತ್ತಿಗೆ ತಂದೆ ಮನೆಗೆ ಬಂದು ಬಾಗಿಲು ತೆಗಿ ಎಂದು ಹೇಳಿದ್ದಾರೆ. ಎಷ್ಟು ಕರೆದರೂ ಅತ್ತಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಈ ಕಾರಣದಿಂದ ಕಿಟಕಿಯನ್ನು ಒಡೆದು ಮನೆಯೊಳಗೆ ಕೃಷ್ಣಮೂರ್ತಿ ಹೋಗಿದ್ದಾರೆ.
ಒಳಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಗಳು ಪತ್ತೆಯಾಗಿದ್ದಾಳೆ. ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಆದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿಕೊಂಡು ಸ್ವಲ್ಪ ಖ್ಯಾತಿಯಾಗಿದ್ದ ಬಾಲಕಿಯನ್ನು ಅಕ್ಕಪಕ್ಕದವರು ʼಇನ್ಸ್ಟಾ ಕ್ವೀನ್ʼ ಎಂದೇ ಕರೆಯುತ್ತಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.