ನ್ಯೂಸ್ ನಾಟೌಟ್ : ಪಾನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಮಾ.31 ಕೊನೆಯ ದಿನ ಎಂದು ಹೇಳಲಾಗುತ್ತಿದೆ. ಈ ತಿಂಗಳು ಲಿಂಕ್ ಮಾಡದೇ ಹೋದರೆ ಹತ್ತು ಸಾವಿರದವರೆಗೂ ದಂಡ ಬೀಳುತ್ತದೆ ಎನ್ನುವ ಸುದ್ದಿ ಭಾರೀ ಚರ್ಚೆಯ ವಿಷಯವಾಗಿದೆ.ಒಂದು ಕಡೆಯಲ್ಲಿ ಲಿಂಕ್ ಮಾಡದೇ ಇದ್ದವರು ಆಧಾರ್-ಪಾನ್ ಲಿಂಕ್ ಮಾಡಲು ಸೈಬರ್ ಗಳ ಮುಂದೆ ಮುಗಿಬಿದ್ದಿದ್ದಾರೆ. ಇದೀಗ ಲಿಂಕ್ ಮಾಡುವ ಕೆಲಸ ಭರದಿಂದ ಸಾಗುತ್ತಿದೆ.
ಈ ಕುರಿತು ಜನರ ವಿರೋಧವೂ ವ್ಯಕ್ತವಾಗಿದೆ.ಈ ಮಧ್ಯೆ ಸೈಬರ್ ಸೆಂಟರ್ ಗಳು ಆದಾಯ ತೆರಿಗೆ ಅಧಿಕೃತ ವೆಬ್ ಸೈಟ್ ಗಳಲ್ಲಿ ಲಿಂಕ್ ಮಾಡದೇ ಬೇರೆ ಬೇರೆ ಸೈಟ್ ಗಳಿಂದಲೂ ಮಾಡಿ ಜನರಿಗೆ ಮೋಸ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ. ಇದು ನಿಮ್ಮ ದತ್ತಾಂಶ ಆನ್ ಲೈನ್ ವಂಚಕರ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
*ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ಜಾಲತಾಣ https://www.incometax.gov.in/iec/foportal/ ಈ ಲಿಂಕ್ ಗೆ ಭೇಟಿ ನೀಡಬೇಕು
*ನಂತರ ಲಿಂಕ್ ಆಧಾರ್ ಸ್ಟೇಟಸ್ ಎಂಬುವುದನ್ನು press ಮಾಡಬೇಕು
*ತದನಂತರ ನಿಮ್ಮ ಆಧಾರ್ ಹಾಗೂ ಪಾನ್ ನಂಬರನ್ನು ಗೊತ್ತುಪಡಿಸಿದ ಸ್ಥಳದಲ್ಲಿ ನಮೂದಿಸಿ ನಿಮ್ಮ ಪಾನ್ ಕಾರ್ಡ್ ಆಧಾರ್ ಗೆ ಲಿಂಕ್ ಆಗಿದೆಯಾ ಎಂದು ಪರಿಶೀಲಿಸಿ…
ಲಿಂಕ್ ಆಗಿಲ್ಲ ಎಂದಾದರೆ ಮತ್ತೆ ಹಿಂದಕ್ಕೆ ಬಂದು website ನಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆಯನ್ನು ಒತ್ತಿ, ಅದರಲ್ಲಿ ಸೂಚಿಸಿದ ನಿಯಮಾವಳಿಗಳ ಮೂಲಕ ಲಿಂಕ್ ಮಾಡಬೇಕಿದೆ.