ನ್ಯೂಸ್ ನಾಟೌಟ್: ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಮೈಯೋಸಿಟಿಸ್ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದರು. ಇದೀಗ ಅವರು ಆರೋಗ್ಯ ಸಮಸ್ಯೆಯಿಂದ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಿದ್ದಾರೆ.
ಈ ನಡುವೆ ಚಿತ್ರರಂಗದಲ್ಲೂ ಸಕ್ರೀಯವಾಗಿ ಕಾಣಿಸಿಕೊಳ್ಳುತ್ತಾ,ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.ಅವರು ಫಿಟ್ನೆಸ್ ಕುರಿತ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ʼಶಾಕುಂತಲಂʼ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಮಂತಾ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರ ಕೊಟ್ಟಿರುವ ವಿಡಿಯೋ ಒಂದು ಬಾರಿ ವೈರಲ್ ಆಗಿದೆ.
ಸಮಂತಾ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡು ಇಬ್ಬರೂ ತಮ್ಮ ತಮ್ಮ ಲೈಫ್ ನಲ್ಲಿ ತೊಡಗಿಕೊಂಡಿದ್ದಾರೆ.ಇದಾದ ಬಳಿಕ ಅನೇಕ ಬಾರಿ ಸಮಂತಾ ಅವರ ಮದುವೆ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿತ್ತು. ಅಭಿಮಾನಿಯೊಬ್ಬರು ಸಮಂತಾ ಅವರಿಗೆ ಟ್ವಿಟರ್ ನಲ್ಲಿ “ದಯವಿಟ್ಟು ನೀವು ಯಾರನ್ನಾದರೂ ಡೇಟ್ ಮಾಡಿ” ಎಂದು ಹೇಳಿದ್ದಾರೆ. ಇದಕ್ಕೆ ಪ್ರೀತಿಯಿಂದಲೇ ಸಮಂತಾ ಪ್ರತಿಕ್ರಿಯೆ ನೀಡುತ್ತಾ, “ನೀವು ಪ್ರೀತಿಸುವಷ್ಟು ನನ್ನನ್ನು ಬೇರೆ ಯಾರು ಪ್ರೀತಿಸುತ್ತಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗಿದ್ದು, ಸಮಂತಾರ ಸರಳತೆಯನ್ನುನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.