ನ್ಯೂಸ್ನಾಟೌಟ್: ಬದಿಯಡ್ಕ ಸಮೀಪದ ಪಿಲಾಂಕಟ್ಟೆಯಿಂದ ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಪ್ರೀತಿಸುತ್ತಿದ್ದ ಅನ್ಯ ಧರ್ಮದ ಯುವಕನ ಜತೆ ವಿವಾಹವಾದ ಘಟನೆ ಬೆಳಕಿಗೆ ಬಂದಿದೆ.
ಪಿಲಾಂಕಟ್ಟೆಯ ನಿವಾಸಿ ಫಾತಿಮಾ(19) ನಾಪತ್ತೆಯಾದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಯುವತಿ ನಾಪತ್ತೆ ಬಗ್ಗೆ ಕಾರ್ಯಾಚರಣೆ ನಡೆಸಿದಾಗ ಈಕೆ ಪಾಣತ್ತೂರು ಚೆಂಬೇರಿ ನಿವಾಸಿ ಚಾಲಕನ ಜತೆ ವಿವಾಹವಾಗಿರುವ ವಿಚಾರ ತಿಳಿದುಬಂದಿದೆ. ಈ ದಂಪತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಅವರನ್ನು ಸ್ವಇಚ್ಛೆಯಂತೆ ತೆರಳಲು ತಿಳಿಸಿದಾಗ ಯುವತಿ ಯುವಕನ ಜತೆ ತೆರಳಿದ್ದಾಳೆ. ಯುವಕ ಬಸ್ ಹಾಗೂ ಕಲ್ಲಿನ ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಇವರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.