ಕರಾವಳಿ

ಕಾರ್ಕಳದ ಮೇಣದ ಬತ್ತಿ ತಯಾರಿಕಾ ಫ್ಯಾಕ್ಟರಿಗೆ ಬೆಂಕಿ! 25 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ!

ನ್ಯೂಸ್‌ ನಾಟೌಟ್‌:  ಅತ್ತೂರು ಚರ್ಚ್ ಬಳಿ ಇರುವ ಮೇಣದ ಬತ್ತಿ ತಯಾರಿಸುವ ಫ್ಯಾಕ್ಟರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರು ಪರ್ಪಲೆಗುಡ್ಡೆ ಎಂಬಲ್ಲಿ ಮಾರ್ಚ್ 22 ರಂದು ನಡೆದಿದೆ.

ಮೇಣದ ಬತ್ತಿ ತಯಾರಿಕಾ ಘಟಕ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಸುಮಾರು 25 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಅತ್ತೂರು ಚರ್ಚಿಗೆ ಸೇರಿದ್ದ ಪರ್ಪಲೆ ಗುಡ್ಡದಲ್ಲಿರುವ ಮೇಣದ ಬತ್ತಿ ತಯಾರಿಕಾ ಘಟಕದ ಇಡೀ ಕಟ್ಟಡ, ಮೇಣ ತಯಾರಿಸುವ 3 ಮಷಿನ್ ಹಾಗೂ ಜನವರಿಯಿಂದ ದಾಸ್ತಾನು ಮಾಡಲಾಗಿದ್ದ ಮೇಣದ ಬತ್ತಿ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ನಷ್ಟವುಂಟಾಗಿದೆ.

ಮಾರ್ಚ್ 22 ರ ಸಂಜೆ ಆಕಸ್ಮಿಕವಾಗಿ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ತಕ್ಷಣವೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಎರಡು ಅಗ್ನಿಶಾಮಕ ದಳದ ವಾಹನಗಳು ಘಟನಾಸ್ಥಳಕ್ಕೆ ಬಂದರೂ ಬೆಂಕಿ ಬಹುತೇಕ ಘಟಕವನ್ನು ವ್ಯಾಪಿಸಿದ ಹಿನ್ನಲೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ , ಹಾಗಾಗಿ ಘಟನೆಯಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಮಾಹಿತಿ ದೊರೆತ ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ 3 ಗಂಟೆಗಳ ಕಾಲ ಸತತ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಅತ್ತೂರು ಪರಿಸರದಲ್ಲಿನ ಪರ್ಪಲೆಗಿರಿಯ ಬೆಟ್ಟದಲ್ಲಿ ಕಳೆದ 15 ದಿನಗಳ ಹಿಂದೆ ವಾರದಲ್ಲಿ ಎರಡು ಬಾರಿಯಂತೆ ಬೆಂಕಿ ಅವಘಡ ಸಂಭವಿಸುತ್ತು ಎಂದು ವರದಿ ತಿಳಿಸಿದೆ.

Related posts

ಅರಂತೋಡು: ಕಾರು-ಬೈಕ್ ನಡುವೆ ಡಿಕ್ಕಿ, ಚೆಂಬು ಮೂಲದ ಬೈಕ್ ಸವಾರನಿಗೆ ಗಾಯ

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ 2 ಲಕ್ಷ ರೂ. ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಡಿಡಿ ಮೂಲಕ ಹಸ್ತಾಂತರ

ಸುಳ್ಯಕ್ಕೆ ಬರ್ತಿದ್ದಾರೆ ಯುವಕರ ಸ್ಫೂರ್ತಿ ‘ಸಿಂಗಂ’ ಅಣ್ಣಾಮಲೈ..!