ನ್ಯೂಸ್ ನಾಟೌಟ್: ಕ್ಯಾನ್ಸರ್ ರೋಗದಿಂದ ತನ್ನ ಒಂದು ಕಣ್ಣನ್ನು ಕಳೆದುಕೊಂಡಿದ್ದ 33 ವರ್ಷದ ಯುಎಸ್ ನಿವಾಸಿಯಾದ ಬ್ರಿಯಾನ್ ಸ್ಟ್ಯಾನಿ ಇದೀಗ ಕಳೆದು ಕೊಂಡ ಕಣ್ಣಾನ್ನೇ ಬೆಳಕು ಬರುವಂತೆ ಮಾಡಿದ್ದಾರೆ.
ನಾವೆಲ್ಲಾ ಕತ್ತಲಿನಲ್ಲಿ ಟಾರ್ಚ್ ಅಥವಾ ಮೊಬೈಲ್ ಲೈಟ್ಗಳನ್ನು ಬಳಸುತ್ತೇವೆ. ಆದರೆ ಈತ ಕತ್ತಲಾಗಿರುವ ತನ್ನ ಕಣ್ಣಾನೆ ಬೆಳಕಾಗಿ ಪರಿವರ್ತಿಸಿದ್ದಾನೆ. ಹೌದು ತನ್ನ ಒಂದು ಕಣ್ಣನ್ನು ಕಳೆದುಕೊಂಡು ಸುಮ್ಮನಿರದ ಈತ, ದೃಷ್ಟಿ ಹೋದ ಅದೇ ಕಣ್ಣನ್ನು ಆತ ಪ್ಲ್ಯಾಷ್ಲೈಟ್ ಆಗಿ ಬದಲಿಸಿಕೊಂಡಿದ್ದು ಈಗ ಸುದ್ದಿಯಾಗುತ್ತಿದೆ.
ವೃತ್ತಿಯಲ್ಲಿ ಈತ ಎಂಜಿನಿಯರ್ ಆಗಿದ್ದು, ಆದರಿಂದ ಹೊಸತನ್ನು ಅನ್ವೇಷಿಸುವುದು, ಪ್ರಯೋಗವನ್ನು ನಡೆಸುವುದರಲ್ಲಿ ಒಲವು ರೂಢಿಸಿಕೊಂಡಿದ್ದಾರೆ. ಇನ್ನು ಪ್ರಯೋಜನಕ್ಕೆ ಬಾರದೆಂಬ ಸತ್ಯದ ಅರಿವಿದ್ದ ತನ್ನ ಕಣ್ಣನ್ನು ಹೇಗೆ ಪ್ರಯೋಜನಕಾರಿಯಾಗಿ ಮಾಡಬಹುದು ಎಂದು ಯೋಚಿಸಿದ್ದ ಈತನಿಗೆ ಐಡಿಯಾ ಒಂದು ಹೊಳೆದಿದೆ. ಈತ ತನ್ನ ಕಣ್ಣುಗುಡ್ಡೆಯನ್ನು ಹೆಡ್ಲ್ಯಾಂಪ್ ಆಗಿ ಬದಲಾಯಿಸಿಕೊಂಡಿದ್ದಾನೆ.
ಬ್ಯಾಟರಿ ಚಾಲಿತ ಈ ಲೈಟನ್ನು ಕಾಂಟಾಕ್ಟ್ ಲೆನ್ಸ್ ಧರಿಸುವ ಮಾದರಿಯಲ್ಲಿ ಕಣ್ಣಿನೊಳಗೆ ಧರಿಸಿಕೊಂಡರೆ ಆಯಿತು. ಕಣ್ಣುಗುಡ್ಡೆಯೇ ಬೆಳಕು ನೀಡಿದಂತೆ ಝಗಮಗಿಸುತ್ತದೆ. ಕತ್ತಲಲ್ಲಿ ಯಾವ ಟಾರ್ಚಿಗೂ ಕಮ್ಮಿಯಿಲ್ಲವೆಂಬಂತೆ ಪ್ರಕಾಶವಾಗಿ ಬೆಳಗುತ್ತದೆ. ಪುಸ್ತಕ ಓದಲೂ ಸಾಕಾಗುವಷ್ಟು ಬೆಳಕನ್ನು ಇದು ನೀಡುತ್ತದೆ.
ಈತ ತನ್ನ ಕಣ್ಣುಗೆ ಅಳವಡಿಸಿದ ಹೆಡ್ಲ್ಯಾಂಪ್ ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕೇವಲ ಎರಡು ದಿನಗಳಲ್ಲಿ ಒಂದು ಮಿಲಿಯನ್ಗೂ ಹೆಚ್ಚು ಮಂದಿಯಿಂದ ವೀಕ್ಷಣೆ ಪಡೆದಿದ್ದು, ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.