ನ್ಯೂಸ್ ನಾಟೌಟ್: ಮತದಾನ ಬಹಿಷ್ಕಾರದ ಬ್ಯಾನರ್ ಬಳಿ ಸಚಿವ ಅಂಗಾರ ಎಸ್ ರವರು ನೀಡಿದ ಅನುದಾನದ ವಿವರವನ್ನೊಳಗೊಂಡ ಬ್ಯಾನರ್ ಅಳವಡಿಸಿರುವ ಘಟನೆ ಆಲಂಕಾರಿನ ಬುಡೇರಿಯಾ ಎಂಬಲ್ಲಿ ನಡೆದಿದೆ.
ಆಲಂಕಾರು ಕಂದ್ಲಾಜೆ ಪಂಜೋಡಿ ರಸ್ತೆ ಅಭಿವೃದ್ಧಿಗೆ 99 ಲಕ್ಷ, ನಗ್ರಿ ಪರಿಶಿಷ್ಟಜಾತಿ ಕಾಲೋನಿಗೆ 18 ಲಕ್ಷ, ಉಜುರ್ಲಿ ಪರಿಶಿಷ್ಟ ಜಾತಿ ಕಾಲೋನಿಗೆ ರಸ್ತೆ ಅಭಿವೃದ್ದಿಗೆ 64 ಲಕ್ಷ,,ಕಕ್ವೆ ರಸ್ತೆ ಅಭಿವೃದ್ದಿಗೆ 50ಲಕ್ಷ, ಮಿತ್ತನಡ್ಕ ಶರವೂರು ರಸ್ತೆಗೆ 29.85 ಲಕ್ಷ ಅನುದಾನಗಳನ್ನು ರಸ್ತೆ ಅಭಿವೃದ್ದಿಗೆ ಮಂಜೂರು ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.
ಒಟ್ಟು 260.85 ಲಕ್ಷ ಅನುದಾನ ನೀಡಿದ ಬ್ಯಾನರ್ ಹಾಗು ತಾ.ಪಂ ಹಾಗು ಜಿ.ಪಂ ವತಿಯಿಂದ 10 ಲಕ್ಷ ಒಟ್ಟು ಅನುದಾನ ನೀಡಿದ ಬ್ಯಾನರ್ ನ್ನು ಆಲಂಕಾರು ಗ್ರಾ.ಪಂ ಹಾಗು ಸಾರ್ವಜನಿಕರ ಪರವಾಗಿ ಅಳವಡಿಸಲಾಗಿದ್ದು, ಅದರ ಪಕ್ಕದಲ್ಲೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ. ಚುನಾವಣಾ ಪ್ರಚಾರ ಹಾಗು ಆರೋಪ – ಪ್ರತ್ಯಾರೋಪಗಳು ಮತ್ತು ಅಭಿವೃದ್ಧಿಯ ಕಾರ್ಯಕ್ರಮಗಳು ಬ್ಯಾನರ್ ಸಂಘರ್ಷಕ್ಕೆ ಕಾರಣವಾಗಿರುವುದು ವಿಪರ್ಯಾಸ ಎಂಬಂತಾಗಿದೆ.