ನ್ಯೂಸ್ ನಾಟೌಟ್: ತನ್ನ ಕಂಠಸಿರಿಯಲ್ಲೇ ಕೇಳುಗರನ್ನು ಮಂತ್ರಮುಗ್ದರಾಗಿಸುವ ಗಾಯಕಿ ಸುಳ್ಯ ತಾಲೂಕಿನ ಸೂರ್ತಿಲದ ಶುಭದಾ ಆರ್. ಪ್ರಕಾಶ್ ಅವರಿಗೆ ಸತತ ಮೂರನೇ ವರ್ಷವೂ ಆಂಧ್ರಪ್ರದೇಶದ ಶ್ರೀ ಶೈಲ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ನಡೆಯುವ ಯುಗಾದಿ ಸಂಭ್ರಮದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಅವಕಾಶ ಲಭಿಸಿದೆ.
ಶುಭದಾ ಆರ್. ಪ್ರಕಾಶ್ ಅವರು ಜೀ ಕನ್ನಡ ವಾಹಿನಿಯ ಲಿಟಲ್ ಚಾಂಪ್ ಸೀಸನ್ 16ರ ಭಾಗವಹಿಸಿ ತನ್ನ ತನ್ನ ಕಂಠಸಿರಿಯಿಂದ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ಈಗಾಗಲೇ ಹಲವಾರು ಕಾರ್ಯಕ್ರಮಗಳಲ್ಲಿ ಅವಕಾಶ ಪಡೆದಿರುವ ಶುಭದಾ ಅವರಿಗೆ ಎರಡು ಬಾರಿ ಆಂಧ್ರಪ್ರದೇಶದ ಶ್ರೀ ಶೈಲ ಮಲ್ಲಿಕಾರ್ಜುನ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಭಕ್ತಿಗೀತೆ, ಜಾನಪದ ಗೀತೆ ಮತ್ತು ಶಾಸ್ತ್ರೀಯ ಸಂಗೀತ ಹಾಡುವ ಅವಕಾಶ ಲಭಿಸಿದ್ದು, ಇದೀಗ ಮೂರನೇ ವರ್ಷವೂ ಸುಳ್ಯದ ಪ್ರತಿಭೆ ಹೊರ ರಾಜ್ಯದಲ್ಲಿ ಅವಕಾಶ ಲಭಿಸಿದಂತಾಗಿದೆ.
ಶುಭದಾ ಆರ್. ಪ್ರಕಾಶ್ ಅವರು ಸುಳ್ಯ ತಾಲೂಕು ಸೂರ್ತಿಲ ನಿವಾಸಿ ರವಿಪ್ರಕಾಶ್ ಸಿ.ಪಿ. ಮತ್ತು ಜಯಶ್ರೀ ಆರ್. ಪ್ರಕಾಶ್ ದಂಪತಿಯ ಪುತ್ರಿ. ಪ್ರಸ್ತುತ ಈಕೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ಬಿಬಿಎ ತರಗತಿಯಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.