ನ್ಯೂಸ್ ನಾಟೌಟ್: ಆಧಾರ್ ನಂಬರ್ ಜೊತೆ ಪಾನ್ ( Permanent Account Number) ನಂಬರ್ ಜೋಡಿಸುವುದನ್ನು ಭಾರತದ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಆಧಾರ್ ಮತ್ತು ಪಾನ್ 2023ರ ಮಾರ್ಚ್ 31ರೊಳಗೆ ಲಿಂಕ್ ಮಾಡಿಸದಿದ್ದರೆ ನಿಮ್ಮ PAN ನಿಷ್ಕ್ರಿಯಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.
ಆಧಾರ್ ಮತ್ತು ಪಾನ್ ನಂಬರ್ ಲಿಂಕ್ ಆಗದಿದ್ದರೆ 2023ರ ಏಪ್ರಿಲ್ 1ರ ನಂತರ ಪಾನ್ ಕಾರ್ಡ್ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಆದಾಯ ಮತ್ತು ತೆರಿಗೆ ಇಲಾಖೆ ತಿಳಿಸಿದೆ. ಆಧಾರ್ ಮತ್ತು ಪಾನ್ ನಂಬರ್ ಲಿಂಕ್ ಮಾಡಲು ಇನ್ನು ಕೇವಲ ಒಂಬತ್ತು ದಿನಗಳು ಮಾತ್ರ ಬಾಕಿ ಉಳಿದಿದ್ದು, ಒಂದು ವೇಳೆ ಈ ಅಂತಿಮ ಗಡುವಿನೊಳಗೆ ಲಿಂಕ್ ಮಾಡಿಸದಿದ್ದರೆ ಪಾನ್ ನಿಷ್ಕ್ರಿಯಗೊಳ್ಳುವುದರ ಜೊತೆಗೆ ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ ಇಲಾಖೆ ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಪ್ರವೇಶಿಸಿ
ಎಡಬದಿಯಲ್ಲಿ Quick Liks ಕಾಣಿಸುತ್ತದೆ. https://www.incometax.gov.in/iec/foportal/ ಅಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ
ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ, ಬಳಿಕ View Link Aadhaar Status ಮೇಲೆ ಕ್ಲಿಕ್ ಮಾಡಿ
ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ, “Your PAN is already linked to given Aadhaar” (ನಿಮ್ಮ ಪಾನ್ ಈಗಾಗಲೇ ಈ ಆಧಾರ್ ಜೊತೆ ಲಿಂಕ್ ಆಗಿದೆ) ಎಂಬಂತಹ ಸಂದೇಶ ಬರುತ್ತದೆ.
ಈ ಪ್ರಕ್ರಿಯೆಯನ್ನು ನೀವು ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ಗೆ ಲಾಗಿನ್ ಅಗದೆಯೇ ಪಡೆಯಬಹುದಾದ ಸೇವೆ.
ಇನ್ನು, ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್ಗೆ https://incometaxindiaefiling.gov.in/ ಹೋಗಿ ಅಲ್ಲಿ ನೀವು ಲಾಗಿನ್ ಆಗಬೇಕು. ಅಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ನಡೆಸಬಹುದು.
ಪಾನ್ ಜೊತೆ ನಿಮ್ಮ ಆಧಾರ್ ಲಿಂಕ್ ಅಗಿದ್ದರೆ ಆಧಾರ್ ನಂಬರ್ ಕಾಣುತ್ತದೆ. ಇಲ್ಲದಿದ್ದರೆ ಲಿಂಕ್ ಆಧಾರ್ ಸ್ಟೇಟಸ್ ಕಾಣುತ್ತದೆ. ನೀವು ಆಧಾರ್ ಮತ್ತು ಪಾನ್ ಅನ್ನು ಲಿಂಕ್ ಮಾಡಬೇಕಾಗುತ್ತದೆ.