ನ್ಯೂಸ್ ನಾಟೌಟ್: ರಸ್ತೆ ಅಪಘಾತದಿಂದ ಗಾಯವಾಗಿದ್ದ ವಿದ್ಯಾರ್ಥಿನಿಯು ಆಸ್ಪತ್ರೆಯ ಬೆಡ್ನಲ್ಲಿ ಪರೀಕ್ಷೆ ಬರೆದ ಘಟನೆ ಮುಂಬಯಿಯ ಬಾಂದ್ರಾದಲ್ಲಿ ನಡೆದಿದೆ.
ಅಂಜುಮನ್-ಐ-ಇಸ್ಲಾಂ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮುಬಾಶಿರಾ ಸಾದಿಕ್ ಸಾಯ್ಯದ್ ಇತ್ತೀಚೆಗೆ ತಮ್ಮ ವಿಜ್ಞಾನ ಪರೀಕ್ಷೆ ಬರೆದು ಮನೆಗೆ ತೆರಳುವಾಗ ಕಾರೊಂದು ಢಿಕ್ಕಿ ಹೊಡೆದಿದೆ. ಈ ಅಪಘಾತದಿಂದ ಮುಬಾಶಿರಾಳ ಕಾಲಿಗೆ ಬಲವಾದ ಗಾಯಗಳಾಗಿವೆ. ಇದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅನಿವಾರ್ಯತೆ ಎದುರಾಗಿತ್ತು. ಈ ವೇಳೆ ಶಿಕ್ಷಕರ ಬಳಿ ನೋವಿನಲ್ಲೇ ನಾನು ಪರೀಕ್ಷೆಯನ್ನು ಬರೆಯಬೇಕೆಂದು ವಿದ್ಯಾರ್ಥಿನಿ ಹೇಳಿ ಆಪರೇಷನ್ ಥಿಯೆಟರ್ ಒಳಗೆ ಹೋಗುತ್ತಾಳೆ.
ಪ್ರತಿಭಾವಂತ ವಿದ್ಯಾರ್ಥಿಯಾದ ಕಾರಣದಿಂದ ಮುಬಾಶಿರಾಳಿಗೆ ಸಂಬಂಧಪಟ್ಟ ಶಿಕ್ಷಕಕರು, ಅಧಿಕಾರಿಗಳು ಉಳಿದ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ. ಅದಕ್ಕೆ ಅನುಗುಣವಾಗಿ ಎಲ್ಲಾ ತಯಾರಿ ಮಾಡಿಲಾಗಿದ್ದು, ಆಂಬ್ಯುಲೆನ್ಸ್ ಮಲಗಿಕೊಂಡೇ ವಿದ್ಯಾರ್ಥಿನಿ ಪರೀಕ್ಷೆ ಬರೆಯಲಿದ್ದಾರೆ ಎಂದು ವರದಿ ತಿಳಿಸಿದೆ.
ಬಡ ಕುಟುಂಬದ ವಿದ್ಯಾರ್ಥಿಯಾಗಿರುವ ಈಕೆಗೆ ಶಿಕ್ಷಕರು ಅಪಘಾತದ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.