ನ್ಯೂಸ್ ನಾಟೌಟ್: ಸುಳ್ಯ ಭಾಗದ ಜನರಲ್ಲಿ ಚುನಾವಣಾ ಹತ್ತಿರ ಬರುತ್ತಿದ್ದಂತೆ ಸರಕಾರದ ವಿರುದ್ಧ ಇರುವ ಮನಸ್ತಾಪಗಳು ಪ್ರತಿಭಟನೆಯ ರೂಪದಲ್ಲಿ ವ್ಯಕ್ತವಾಗುತ್ತಿವೆ. ಜನಗಳ ಕಷ್ಟಕ್ಕೆ ಸ್ಪಂದಿಸದೆ, ಜನರ ಬೇಡಿಕೆಗಳನ್ನು ಇಡೇರಿಸದೆ ಇರುವ ರಾಜಕೀಯ ನಾಯಕರು, ಜನ ಪ್ರತಿನಿಧಿಗಳ ವಿರುದ್ಧ ಮತದಾನ ಬಹಿಷ್ಕಾರದ ಬ್ಯಾನರ್ಗಳು ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿದೆ.
ಇದೀಗ ಅರಂತೋಡು ಭಾಗದ ಅರಮನೆಗಯ ಗ್ರಾಮಸ್ಥರು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಬ್ಯಾನರ್ ಅಳವಡಿಕೆ ಮಾಡಿದ್ದು,
ಅರಂತೋಡು ಗ್ರಾಮಸ್ಥರ ಬಹುಕಾಲದ ಬೇಡಿಕೆಯಾದ ಸಂಪರ್ಕ ಸೇತುವೆಗೆ ಈ ವರೆಗೂ ಈಡೇರದೆ ಇರುವುದರಿಂದ, ಯಾವುದೇ ಕ್ರಮ ಕೈಗೊಳ್ಳದ ಜನಪ್ರತಿನಿಧಿಗಳ ವಿರುದ್ಧ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಇಲ್ಲಿನ ಗ್ರಾಮಸ್ಥರು ಮನೆಯಿಂದ ನಗರಕ್ಕೆ ತೆರಳಬೇಕಾದರೆ ತೆಂಗಿನ ಮರ, ಅಡಿಕೆ ಮರದ ತುಂಡುಗಳಿಂದ ನಿರ್ಮಿಸಿದ ಸೇತುವೆಯ ಮೂಲಕ ದಾಟಬೇಕಾಗಿದೆ. ಈ ಸೇತುವೇ ಯಾವಗ ಮುರಿದು ಬೀಳುತ್ತದೆ ಎಂಬ ಆತಂಕದಲ್ಲಿ ಗ್ರಾಮಸ್ಥರು ಜೀವನ ಸಾಗಿಸುವಂತಾಗಿದೆ.
ಪ್ರತಿನಿತ್ಯವೂ ಮನೆಯಿಂದ ಕೆಲಸಕ್ಕೆ ತೆರಳುವ ಗ್ರಾಮಸ್ಥರು, ಶಾಲೆಗೆ ಹೋಗುವ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಸೇತುವೆಯನ್ನು ದಾಟಬೇಕಾದ ಪರಿಸ್ಥಿತಿ ಕಳೆದ 24 ವರ್ಷಗಳಿಂದ ವಿರ್ಮಾಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಈ ಬಗ್ಗೆ ಜನಪ್ರತಿನಿಧಿಗಳಲ್ಲಿ ಹೇಳಿಕೊಂಡರೆ ಅವರು ಕೇವಲ ಭರವಸೆಯ ಮಾತುಗಳನ್ನಷ್ಟೇ ಆಡುತ್ತಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಇತ್ತ ಹಿಂತಿರುಗಿ ನೋಡುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.