ಜೈಪುರ: ಪೊಲೀಸರೆಂದರೆ ಕಟ್ಟು ನಿಟ್ಟು. ಶಿಸ್ತಿನ ಸಿಪಾಯಿಗಳು. ಕರ್ತವ್ಯ ನಿಷ್ಠೆಗೆ ಇನ್ನೊಂದು ಹೆಸರೇ ಪೊಲೀಸರು. ಆದರೆ ಈ ಕೆಲಸಕ್ಕೆ ಧಕ್ಕೆ ತರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ರಾಜಸ್ಥಾನ ಪೊಲೀಸ್ ಇಲಾಖೆಯ ಘನತೆಗೆ ಮಸಿ ಬಳಿದಿದ್ದು ಮಾತ್ರವಲ್ಲದೇ ಮುಜುಗರ ಪಡುವಂತಹ ವಿಷಯ ಇದಾಗಿದೆ.
ಏನಿದು ವಿಡಿಯೋ?
ವಿಡಿಯೋದಲ್ಲಿ ಡಿಎಸ್ ಪಿ ಹಾಗೂ ಮತ್ತು ಮಹಿಳಾ ಕಾನ್ಸ್ಟೇಬಲ್ ಈಜುಕೊಳದಲ್ಲಿ ಆಡುತ್ತಾ ಅಶ್ಲೀಲ ಕೃತ್ಯವೆಸಗಿರುವ ದೃಶ್ಯಗಳಿವೆ. ಇವರಿಬ್ಬರೂ ಈ ಕೃತ್ಯದಲ್ಲಿ ಅದೆಷ್ಟು ತಲ್ಲೀನರಾಗಿದ್ದರೆಂದರೆ, ಕೊಳದಲ್ಲಿ ಮಗು ಸ್ನಾನ ಮಾಡುತ್ತಿದೆ ಎಂಬುವುದನ್ನು ಮರೆತ್ತಿದ್ದಾರೆ. ಮಗುವಿನೆದುರೇ ಅಶ್ಲೀಲ ಕೃತ್ಯವೆಸಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಕೆಂಡ ಮಂಡಲರಾಗಿದ್ದಾರೆ. ವಾಸ್ತವವಾಗಿ, 2 ನಿಮಿಷ 38 ಸೆಕೆಂಡುಗಳ ಈ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ ಹೀರಾಲಾಲ್ ಸೈನಿ ತಮ್ಮೆಲ್ಲಾ ಮಿತಿಗಳನ್ನು ಮೀರಿದ್ದಾರೆ. ಇವರು ಅಜ್ಮೀರ್ ಜಿಲ್ಲೆಯ ಬೇವಾರ್ ನಲ್ಲಿ ಡಿಎಸ್ ಪಿಯಾಗಿ ನೇಮಕಗೊಂಡಿದ್ದಾರೆ. ಡಿಎಸ್ ಪಿ ಜೊತೆಗಿರುವ ಮಹಿಳೆ ಅವರೊಂದಿಗೆ ಕಾರ್ಯ ನಿರ್ವಹಿಸುವ ಮಹಿಳಾ ಕಾನ್ಸ್ಟೇಬಲ್ ಎಂಬುವುದು ಉಲ್ಲೇಖನೀಯ. ಅವರಿಬ್ಬರ ಜೊತೆ ಒಂದು ಮಗು ಕೂಡ ಈಜುಕೊಳದಲ್ಲಿ ಆಟವಾಡುತ್ತಿದ್ದು, ಇದು ಮಹಿಳಾ ಕಾನ್ಸ್ಟೇಬಲ್ ಮಗು ಎನ್ನಲಾಗಿದೆ.