ನ್ಯೂಸ್ನಾಟೌಟ್: ಕೇಂದ್ರ ಸರ್ಕಾರ ರಬ್ಬರ್ ಬೆಲೆಯನ್ನು ಕಿಲೋಗ್ರಾಂಗೆ 300 ರೂ.ಗೆ ಏರಿಸಿಬೇಕು. ಈ ಬೇಡಿಕೆಯನ್ನು ಈಡೇರಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿಗೆ ಬೆಂಬಲ ನೀಡಲಾಗುವುದು ಎಂದು ರೋಮನ್ ಕೆಥೊಲಿಕ್ ಚರ್ಚ್ ತಲಸ್ಸೆರಿ ಆರ್ಚ್ ಬಿಷಪ್ ಮಾರ್ ಜೋಸೆಫ್ ಪಾಂಪ್ಲಾನಿ ಹೇಳಿದ್ದಾರೆ.
ತಲಶ್ಶೇರಿ ಆರ್ಚ್ ಡಯಾಸಿಸ್ನ ಕ್ಯಾಥೋಲಿಕ್ ರೈತರ ಸಮಾವೇಶವನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು. ರಾಜ್ಯದ ಹೆಚ್ಚಿನ ರಬ್ಬರ್ ಎಸ್ಟೇಟ್ಗಳು ಕೆಥೊಲಿಕ್ ರೈತರ ಒಡೆತನದಲ್ಲಿದೆ. ಕೆಥೊಲಿಕ್ ಚರ್ಚ್ ರಾಜಕೀಯ ನಿರ್ಧಾರದ ಹಿಂದೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದೀಗ ರಬ್ಬರ್ ಪ್ರತಿ ಕೆಜಿಗೆ ರೂ. 131ರಿಂದ ರೂ 151ರ ನಡುವೆ ಮಾರಾಟವಾಗುತ್ತಿದೆ. ಕೆಥೊಲಿಕ್ ಬಿಷಪ್ ಅವರ ಈ ಹೇಳಿಕೆ ಕೇರಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಕೇರಳದ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.