ನ್ಯೂಸ್ ನಾಟೌಟ್: ವಿಶ್ವದ ಅತೀ ಕುಳ್ಳ ಬಾಡಿ ಬಿಲ್ಡರ್ ಎಂದೇ ಖ್ಯಾತಿಯಾಗಿರುವ ಮಹಾರಾಷ್ಟ್ರದ ರಾಯಗಢದ ಪ್ರತೀಕ್ ಮೋಹಿತೆ (28) ಅವರು ತನ್ನ ಪ್ರೀತಿಯ ಗೆಳತಿಯೊಂದಿಗೆ ಹಸೆಮಣೆ ಏರಿದ್ದಾರೆ.
ಪ್ರತೀಕ್ ಮೋಹಿತೆ ಅವರು ವಿಶ್ವದ ಅತೀ ಕುಳ್ಳ ಬಾಡಿ ಬಿಲ್ಡರ್ ಎಂದು 2021ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡುವ ಮೂಲಕ ಭಾರತಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದರು. ಪ್ರತೀಕ್ ಮೋಹಿತೆ ಅವರು ಮೂರು ಅಡಿ ನಾಲ್ಕು ಇಂಚು ಎತ್ತರವಿದ್ದು, ಪತ್ನಿ ಜಯಾ(22) ಅವರು ನಾಲ್ಕು ಅಡಿ ಎರಡು ಇಂಚು ಎತ್ತರವಿದ್ದಾರೆ. ನಾಲ್ಕು ವರ್ಷದ ಹಿಂದೆ ಪ್ರತೀಕ್ ಜಯಾ ಅವರನ್ನು ಭೇಟಿಯಾಗಿದ್ದರು. ಬಳಿಕ ಇಬ್ಬರ ನಡುವೆ ಆಪ್ತತೆ ಬೆಳೆಯಿತು. ದೀರ್ಘ ಸಮಯದಿಂದ ಸ್ನೇಹಿತರಾಗಿದ್ದ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆಕೆಯನ್ನು ಕಂಡ ಬಳಿಕ ಆಕೆ ತನಗೆ ತುಂಬಾ ಇಷ್ಟವಾದಳು ಎಂದು ಪ್ರತೀಕ್ ಡೈಲಿ ಮೇಲ್ಗೆ ತಿಳಿಸಿದ್ದಾರೆ.
ಇವರ ಮದುವೆಗೆ ಕುಟುಂಬದವರು ಹಾಗೂ ಗೆಳೆಯರು ಸಾಕ್ಷಿಯಾದರು. ಮದುವೆ ಸಂಭ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರತೀಕ್ ಮೋಹಿತೆ ಇನ್ಸ್ಟಾಗ್ರಾಂನ ಡಿಜಿಟಲ್ ಕಂಟೆಂಟ್ ಕ್ರಿಯೀಟರ್ ಆಗಿದ್ದು, ತಮ್ಮ ಫಿಟ್ನೆಸ್ ಕುರಿತು ಕಿರು ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ತುಂಬಾ ಅಭಿಮಾನಿಗಳನ್ನು ಹೊಂದಿದ್ದಾರೆ.