ನ್ಯೂಸ್ನಾಟೌಟ್: ಮರ್ದಾಳ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಕಾಲನಿಯೊಂದರ ಸಮೀಪದ ಮನೆಯಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮನೆಗೆ ಕಡಬ ಪೊಲೀಸರು ದಾಳಿ ಮಾಡಿ ಮದ್ಯದ ಬಾಟಲಿ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ 30ಕ್ಕೂ ಅಧಿಕ ಮದ್ಯದ ಪ್ಯಾಕೆಟ್ಗಳು ಪತ್ತೆಯಾಗಿವೆ. ಈ ಬಗ್ಗೆ ಕಾಲನಿ ನಿವಾಸಿಯೋರ್ವನ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. ಆರೋಪಿ ಕಡಬ ಪೇಟೆಯಿಂದ ಮದ್ಯದ ಪ್ಯಾಕೇಟ್ಗಳನ್ನು ತಂದು ಬೊಳ್ಳೂರು ಕ್ರಾಸ್ ಬಳಿ ಇಳಿದು ನಡೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಪರಿಶೀಲಿಸಿದಾಗ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ವಶಕ್ಕೆ ಪಡೆದ ಮದ್ಯದ ಮೌಲ್ಯ 2100 ರೂ. ಎಂದು ಅಂದಾಜಿಸಲಾಗಿದೆ.