ನ್ಯೂಸ್ ನಾಟೌಟ್: ಉಕ್ರೇನಿಯನ್ ಜನಸಾಮಾನ್ಯರನ್ನು ಮತ್ತು ಮಕ್ಕಳನ್ನು ಕಾನೂನು ಬಾಹಿರವಾಗಿ ಗಡೀಪಾರು ಮಾಡಿ, ಯುದ್ಧದ ಮೂಲಕ ಮಾರಣಹೋಮಕ್ಕೆ ಕಾರಣವಾದ ಆರೋಪದ ಮೇಲೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಶುಕ್ರವಾರ ಮಾರ್ಚ್ ೧೮ರಂದು ಬಂಧನ ವಾರಂಟ್ ಹೊರಡಿಸಿದೆ.
ಪುಟಿನ್ ಯುದ್ಧ ಅಪರಾಧಗಳಿಗೆ ಜವಾಬ್ದಾರರು ಎಂದು ನ್ಯಾಯಾಲಯ ಆರೋಪಿಸಿದೆ ಮತ್ತು ಉಕ್ರೇನ್ನಿಂದ ರಷ್ಯಾಕ್ಕೆ ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡಿರುವುದು ಮಾನವ ಹಕ್ಕುಗಲ ಉಲ್ಲಂಘನೆ ಎಂದು ಕೋರ್ಟ್ ತಿಳಿಸಿದೆ.
ರಷ್ಯಾ ತನ್ನ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಅಂದರೆ 24 ಫೆಬ್ರವರಿ 2022 ರಿಂದ ಉಕ್ರೇನ್ನಲ್ಲಿ ಅಮಾನವೀಯ ಅಪರಾಧಗಳಿಗೆ ರಷ್ಯಾ ನೇರ ಹೊಣೆ ಎಂದು ನ್ಯಾಯಾಲಯ ಹೇಳಿದೆ.
ರಷ್ಯಾ ಆರೋಪಗಳನ್ನು ನಿರಾಕರಿಸಿದ್ದು, ವಾರಂಟ್ಗಳನ್ನು “ಅತಿರೇಕದ” ವರ್ತನೆ ಎಂದು ಹೇಳಿಕೊಂಡಿದೆ. “ಈ ಕ್ರಮದಿಂದ ಹೆಚ್ಚೇನು ಮಾಡಲು ಸಾಧ್ಯವಿಲ್ಲ, ಶಂಕಿತರನ್ನು ಬಂಧಿಸಲು ಐಸಿಸಿಗೆ ಯಾವುದೇ ಅಧಿಕಾರವಿಲ್ಲ, ಮತ್ತು ಅದರ ಸದಸ್ಯ ರಾಷ್ಟ್ರಗಳಲ್ಲಿ ಮಾತ್ರ ನ್ಯಾಯವ್ಯಾಪ್ತಿಯ ಅಧಿಕಾರವನ್ನು ಚಲಾಯಿಸಬಹುದು. ರಷ್ಯಾ ಸದಸ್ಯ ರಾಷ್ಟ್ರವಲ್ಲ” ಎಂದು ರಷ್ಯಾ ತಿಳಿಸಿದೆ.
ಆದಾಗ್ಯೂ ಇದು ಅಂತಾರಾಷ್ಟ್ರೀಯವಾಗಿ ಪ್ರಯಾಣಿಸಲು ಸಾಧ್ಯವಾಗದಂತಹ ಇತರ ರೀತಿಯಲ್ಲಿ ಅಧ್ಯಕ್ಷರ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.