ನ್ಯೂಸ್ ನಾಟೌಟ್ : ಯೂಟ್ಯೂಬ್,ಇನ್ಸ್ಟಾ,ಫೇಸ್ ಬುಕ್ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಫುಡ್ ವ್ಲಾಗ್ ಗಳ ಹಾವಳಿಯೇ ಜಾಸ್ತಿ.ಆಹಾರಗಳಲ್ಲಿಯೇ ಆವಿಷ್ಕಾರಗಳನ್ನು ಮಾಡುತ್ತಾ ಜನರ ಗಮನ ಸೆಳೆಯಲಾಗುತ್ತದೆ.ಇಂತಹ ವಿಡಿಯೋಗಳು ಲಕ್ಷಗಟ್ಟಲೇ ವೀಕ್ಷಣೆಯನ್ನು ಪಡೆದುಕೊಳ್ಳುತ್ತದೆ..ಇದೀಗ ನಾವು ಹೇಳೊದಕ್ಕೆ ಹೊರಟಿರೋದು ಮಟ್ಕಾ ದೋಸೆ ಬಗ್ಗೆ, ಸಾಮಾನ್ಯವಾಗಿ ಮಟ್ಕಾ ಟೀ ಬಗ್ಗೆ ನಿಮಗೆ ತಿಳಿದಿದೆ.. ಆದರೆ ಮಟ್ಕಾ ದೋಸೆ ಎಂದಾದರೂ ಕೇಳಿದ್ದೀರಾ?ತಿಂದಿದ್ದೀರಾ?ಹಾಗಾದರೆ ಇದು ಎಲ್ಲಿ ಸಿಗುತ್ತೆ ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ...
ಮಟ್ಕಾ ದೋಸೆಯ ವಿಡಿಯೋವನ್ನು ದೀಪಕ್ ಪ್ರಭು ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡೀಯೋ ನೋಡಿದ್ರೆ ಆಶ್ಚರ್ಯದ ಜತೆಗೆ ಬಾಯಲ್ಲಿ ನೀರೂರುವುದು ಗ್ಯಾರಂಟಿ.. #MatkaDosa ಎಂದು ಕ್ಯಾಪ್ಷನ್ ಹಾಕಿದ್ದು,ವಿಡಿಯೋದಲ್ಲಿ ಚೀಸ್, ಮೇಯನೇಸ್ ಮತ್ತು ಸಾಸ್ ಹಾಕಿ ಮಟ್ಕಾ ದೋಸೆಯನ್ನು ತಯಾರಿಸಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಚೀಸ್, ಮೇಯನೇಸ್ನ ಕಾಂಬಿನೇಷನ್ ಇದ್ದರೂ ಕೂಡ ಮಟ್ಕಾ ಏಕೆ? ಎಂದು ಜನ ಕೇಳಿದ್ದಾರೆ.
ಸಾಕಷ್ಟು ಟ್ವಿಟರ್ ಬಳಕೆದಾರರು ದೋಸೆ ಓಕೆ, ಮಟ್ಕಾ ಯಾಕೆ? ಎಂದು ಕಾಮೆಂಟ್ ಮಾಡಿದ್ದಾರೆ. ಅತಿಯಾದ ಚೀಸ್ ಬಳಸಿ, ಸಾಂಪ್ರದಾಯಿಕ ತಿಂಡಿಯಾದ ದೋಸೆಯ ರುಚಿಯನ್ನು ಬದಲಾಯಿಸುತ್ತಿದ್ದಾರೆ? ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಸಿದ್ದಾರೆ. ಇನ್ನು ಕೆಲವರು ಬಾಯಲ್ಲಿ ನೀರೂರುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಒಟ್ಟಿನಲ್ಲಿ ಏನೋ ಕಾಲಕ್ಕೆ ತಕ್ಕ ಹಾಗೆ ವಿಭಿನ್ನ ಪ್ರಯೋಗಗಳನ್ನು ಮಾಡಿ ಗ್ರಾಹಕರನ್ನು ಸೆಳೆಯುವ ಪ್ರಯತ್ನಗಳು ನಡಿತಿವೆ ಅಂದರೆ ತಪ್ಪಲ್ಲ….