ನ್ಯೂಸ್ ನಾಟೌಟ್: ಹೆಚ್ಚಿನ ಶಾಲಾ ಕಾಲೇಜ್ ಗಳಲ್ಲಿ ಇದೀಗ ವಾರ್ಪಿಕ ಪರೀಕ್ಷೆಗಳು ನಡೆಯುತ್ತಿವೆ.ಪರೀಕ್ಷೆ ಎಂದಾಗ ಹತ್ತಾರು ನಿಬಂಧನೆಗಳಿರುತ್ತವೆ.ಪರೀಕ್ಷಾ ಕೇಂದ್ರ,ಹಾಲ್ , ಹಾಲ್ ಟಿಕೆಟ್,ರೋಲ್ ನಂಬರ್,ಸರಿಯಾದ ಸಮಯಕ್ಕೆ ಪರೀಕ್ಷಾ ಹಾಲ್ ಗೆ ತಲುಪುವುದು ಹೀಗೆ ಇವುಗಳನ್ನು ನಾವು ಅನುಸರಿಸಿಕೊಂಡು ಹೋಗಬೇಕಾಗುತ್ತದೆ.ಹೀಗಿರುವಾಗ ಇಲ್ಲೊಬ್ಬರು ತಂದೆ ತನ್ನ ಮಗಳನ್ನು ಗಡಿಬಿಡಿಯಲ್ಲಿ ಬೇರೊಂದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋಗಿದ್ದಾರೆ. ಪಾಪ! ಆ ವಿದ್ಯಾರ್ಥಿನಿಯಾದರೂ ಏನು ಮಾಡಬೇಕು ಹೇಳಿ? ಮುಂದೇನಾಯ್ತು ನೋಡಿ..
ಈ ಘಟನೆ ನಡೆದಿದ್ದು ಗುಜರಾತ್ನ ಅಹಮದಾಬಾದ್ನಲ್ಲಿ . ಘಟನೆಗೆ ತಂದೆಯ ಕೆಲಸದ ಒತ್ತಡವೇ ಕಾರಣ ಎನ್ನಲಾಗುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿ ತನ್ನ ರೋಲ್ ನಂಬರನ್ನು ಎಷ್ಟೇ ಹುಡುಕಾಡಿದರು ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಕೊನೆಗೆ ಆಕೆಗೆ ಅರಿವಾಯಿತು. ತನ್ನನ್ನು ಬೇರೆ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋಗಿರುವ ವಿಷಯ ತಿಳಿದು ಬಂತು. ಇದರಿಂದ ಗಲಿಬಿಲಿಗೊಂಡಳು ವಿದ್ಯಾರ್ಥಿನಿ. ಒತ್ತಡಕ್ಕೆ ಒಳಗಾಗಿರುವುದನ್ನು ಕಂಡ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಆಕೆಯ ಬಳಿ ಬಂದು ವಿಚಾರಿಸಿದರು. ಕೂಡಲೇ ಆಕೆಯನ್ನು ಜೀಪ್ ನಲ್ಲಿ 20 ಕಿಲೋ ಮೀಟರ್ ದೂರದಲ್ಲಿದ್ದ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಆದರ್ಶ್ ಹೆಗಡೆ ಎಂಬವರು “ನಿಗದಿತ ಸಮಯಕ್ಕೆ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಪೊಲೀಸ್ ಅಧಿಕಾರಿಯ ನೆರವಿಗೆ ಧನ್ಯವಾದಗಳು. ನಮ್ಮ ಸಮಾಜದಲ್ಲಿ ಇಂತಹ ಕೆಲವು ಉತ್ತಮ ಪೊಲೀಸ್ ಅಧಿಕಾರಿಗಳಿದ್ದಾರೆ” ಎಂದು ಟ್ವಿಟರ್ ಅಲ್ಲಿ ಪೋಟೋ ಶೇರ್ ಮಾಡಿದ್ದಾರೆ.