ನ್ಯೂಸ್ ನಾಟೌಟ್ : ತಾಯಿಯೊಬ್ಬಳು 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಉಪ್ಪುತಾರ ಪಂಚಾಯತ್ನ ಕೈತಪಾಠಲ್ ನಲ್ಲಿ ಈ ಘಟನೆ ಸಂಭವಿಸಿದೆ. ತಾಯಿ ಲಿಜಿ (38) ಮತ್ತು ಆಕೆಯ ಮಗ ಬೆನ್ ಟಾಮ್ (7) ಮೃತರು.
ತಾಯಿ ಲಿಜಿ ಅವರಿಗೆ 28 ದಿನದ ನವಜಾತ ಶಿಶು ಇದ್ದು ಅದು ಹಾಲು ಕುಡಿಯುವ ಸಂದರ್ಭ ಉಸಿರುಗಟ್ಟಿ ಮೃತಪಟ್ಟಿದೆ. ಮಗುವಿನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಅದೇ ಬೇಜಾರಿನಲ್ಲಿದ್ದ ಲಿಜಿ ತನ್ನ ಮನೆಯವರು ಚರ್ಚ್ ಗೆಂದು ಹೋಗುವಾಗ, ಲಿಜಿ ಹಾಗೂ ಮಗ ಇಬ್ಬರು ಚರ್ಚ್ಗೆ ಹೋಗಿರಲಿಲ್ಲ.ಮನೆಯವರು ಚರ್ಚ್ ನಿಂದ ವಾಪಾಸ್ ಬರುವಾಗ ಮನೆಯಲ್ಲಿ ಇವರಿಬ್ಬರು ಇರಲಿಲ್ಲ. ಲಿಜಿ ಹಾಗೂ ಬೆನ್ ಟಾಮ್ ಅವರಿಬ್ಬರನ್ನು ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಎಲ್ಲೆಡೆ ಹುಡುಕಿದಾಗ ಕೊನೆಗೆ ಬಾವಿಯಲ್ಲಿ ಇಬ್ಬರ ಶವ ಕಂಡು ಬಂದಿದೆ. ಅಗ್ನಿಶಾಮಕ ದಳದವರು ಬಂದು ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.ಲಿಜಿಯವರ ಹಿರಿಯ ಮಗ ಬೆನ್ ಟಾಮ್ ಅವರಿಗೆ ಹೃದಯರೋಗದ ಸಮಸ್ಯೆ ಇತ್ತು ಎಂದು ತಿಳಿದು ಬಂದಿದೆ.