ನ್ಯೂಸ್ ನಾಟೌಟ್: ಆಹಾರೋದ್ಯಮ ಪ್ರಪಂಚದ ಅತ್ಯಂತ ದೊಡ್ಡ ಮಟ್ಟದ ಮತ್ತು ಅವಶ್ಯಕ ಉದ್ಯಮಗಳಲ್ಲಿ ಒಂದು. ಈ ಉದ್ಯಮಕ್ಕೆ ಗ್ರಾಹಕರನ್ನು ಆಕರ್ಷಿಸಲು ಮತ್ತು ಗ್ರಾಹಕರನ್ನು ಸುಲಭವಾಗಿ ತಲುಪಲು ಆಹಾರ ಸಂಸ್ಥೆಗಳು ನಾನಾ ರಿರಿಯ ಉಪಾಯಗಲನ್ನು ಮಾಡುತ್ತವೆ. ಇಗ ಎಲ್ಲಿಗೆ ಬೇಕಾದರು ಫುಡ್ ಡೆಲಿವೆರಿ ಮಾಡುವ ವ್ಯವಸ್ಥೆಗಳಿವೆ.
ಹಸಿವಾದರೆ ಆನ್ಲೈನ್ ನಲ್ಲಿ ಆರ್ಡರ್ ಮಾಡಿ ತಿನ್ನುತ್ತೇವೆ. ಆದರೆ ಆರ್ಡರ್ ಮಾಡುವ ಬದಲು ನಾವೇ ಹೋಗಿ ಬಿರಿಯಾನಿಯನ್ನು ಎಟಿಎಮ ನಂತಹ ಯಂತ್ರಗಳ ಮೂಲಕ ಪಡೆದರೆ ಹೇಗೆ? ಟಿಎಂ ಯಂತ್ರಕ್ಕೆ ಹೇಗೆ ಎಟಿಎಂ ಕಾರ್ಡ್ ನ್ನು ಹಾಕಿ ಹಣ ಪಡೆದುಕೊಳ್ಳುತ್ತೇವೆಯೋ ಹಾಗೆಯೇ ಬಿರಿಯಾನಿಯನ್ನೂ ಈಗ ನಾವು ಪಡೆದುಕೊಳ್ಳಬಹುದು.!
ವಿಚಿತ್ರವೆನಿಸಿದರೂ ಹೀಗೊಂದು ವ್ಯವಸ್ಥೆ ಚೆನ್ನೈನಲ್ಲಿ ಆರಂಭಗೊಂಡಿದೆ. ಚೆನ್ನೈ ಮೂಲದ ಸ್ಟಾರ್ಟ್ ಅಪ್ ಕಂಪೆನಿಯಾಗಿರುವ “ಬಾಯಿ ವೀಟು ಕಲ್ಯಾಣಂ”(ಬಿ.ವಿ.ಕೆ) ಚೆನ್ನೈನ ಕೊಳತ್ತೂರುನಲ್ಲಿ ಬಿರಿಯಾನಿ ಎಟಿಎಂ ಆರಂಭಿಸಿದೆ.
ಎಟಿಎಂ ಯಂತ್ರದ ಹಾಗೆ ಮೂರು ಯಂತ್ರಗಳಿರುತ್ತವೆ. ಆ ಮೂರು ಯಂತ್ರಗಳಲ್ಲಿ ನೀವು ಹೋಗುವ ಯಂತ್ರಗಳಲ್ಲಿ ಬಿರಿಯಾನಿಯ ಮೆನುಗಳು ಬರುತ್ತದೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿದ ಬಳಿಕ ಎಟಿಎಂ ಕಾರ್ಡ್ ಅಥವಾ ಕ್ಯೂಆರ್ ಕೋಡ್ ಮೂಲಕ ಹಣವನ್ನು ಪಾವತಿಸಬಹುದು. ಆದಾದ ನಂತರ ನಿಮ್ಮ ಬಿರಿಯಾನಿ ಪ್ಯಾಕ್ ಆಗಿ ಬರಲು ಎಷ್ಟು ಹೊತ್ತು ಆಗುತ್ತದೆ ಎನ್ನುವ ನಿಮಿಷವನ್ನು ಯಂತ್ರ ತೋರಿಸುತ್ತದೆ. ಯಂತ್ರದ ಕೆಳ ಭಾಗದಲ್ಲಿ ಒಂದು ಬಾಗಿಲು ರೀತಿ ಓಪನ್ ಆಗಿ ಅಲ್ಲಿ ನಿಮ್ಮ ಬಿರಿಯಾನಿ ಅಚ್ಚುಕಟ್ಟಾಗಿ ಪ್ಯಾಕ್ ಆಗಿ ಬರುತ್ತದೆ.
ಭಾರತದ ಮೊದಲ ಬಿರಿಯಾನಿ ಎಟಿಎಂ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ಆದರೆ ಕೆಲವರು ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.ಬಾಯಿ ವೀಟು ಕಲ್ಯಾಣಂ ಬಿರಿಯಾನಿ ಡೆಲಿವೆರಿ ಮಾಡುವ ಸಂಸ್ಥೆ 2020 ರಲ್ಲಿ ಚೆನ್ನೈನಲ್ಲಿ ಆರಂಭವಾಯಿತು.