ನ್ಯೂಸ್ ನಾಟೌಟ್: ಅನುಮಾನ ಎನ್ನುವ ವಿಷ ಬೀಜ ಒಬ್ಬ ಮನುಷ್ಯನ ಮನಸ್ಸಲ್ಲಿ ಹುಟ್ಟಿದರೆ ಎಂತಹ ಘೋರ ದುರಂತ ನಡೆದು ಹೋಗಬಹುದು ಎನ್ನುವುದಕ್ಕೆ ಇಲ್ಲೊಂದು ಘಟನೆಯೇ ಸಾಕ್ಷಿಯೆಂಬಂತಿದೆ. ಹೌದು,ಹೆಂಡತಿ ಜತೆ ೫೦೦ ರೂ. ಇದ್ದಿರುವುದಕ್ಕೆ ಅನೈತಿಕ ಸಂಬಂಧ ಹೊಂದಿರಬಹುದೆಂಬ ಅನುಮಾನಗೊಂಡ ಪತಿ ತನ್ನ ಪತ್ನಿ, ಮೂವರು ಹೆಣ್ಣು ಮಕ್ಕಳು ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅವರ ಕೊಲೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮುದ್ದನೇರಳೆಕೆರೆ ಗ್ರಾಮದಲ್ಲಿ ನಡೆದಿದೆ.
ರಾಮಾಂಜಿನಪ್ಪ, ಶಾಂತಮ್ಮ ಎನ್ನುವವಳನ್ನ ಮದುವೆಯಾಗಿದ್ದ.ದಂಪತಿಗೆ ಮೂವರು ಹೆಣ್ಣು ಮಕ್ಕಳು .ಸುಖ ಸಂಸಾರ ನಡೆಸುತ್ತಿದ್ದರು.ಇತ್ತೀಚಿಗೆ ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸುತ್ತಿದ್ದ ಗಂಡ ರಾಮಾಂಜಿನಪ್ಪ ಆಗಾಗ ಗಲಾಟೆ ಮಾಡ್ತಿದ್ದ ಎನ್ನಲಾಗಿದೆ. ಒಂದು ದಿನ ಹೆಂಡತಿ ಬಳಿ 500 ರೂಪಾಯಿ ನೋಟು ಸಿಕ್ಕಿದ್ದೇ ಕಾರಣ, ಆ ಸಂಸಾರದಲ್ಲಿ ನಡೆಯಬಾರದು ನಡೆದೇಹೊಯ್ತು.ಪತಿ ಇಟ್ಟ ದ್ವೇಷದ ಬೆಂಕಿಗೆ ನಾಲ್ಕು ಜೀವಗಳು ನಲುಗಿಹೋಗಿವೆ. ಒಂದು ಜೀವ ಇಹಲೋಕ ತ್ಯಜಿಸಿದ್ದರೆ, ಇನ್ನುಳಿದ ಮೂವರು ಆಸ್ಪತ್ರೆ ಪಾಲಾಗಿದ್ದಾರೆ. ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ. ಹೆಂಡತಿ ಬಳಿ ಸಿಕ್ಕ ಬರೀ 500ರ ನೋಟು. ಅನೈತಿಕ ಸಂಬಂಧ ಹೊಂದಿರಬಹುದೆಂದು ಅನುಮಾನಗೊಂಡ ಪತಿ ತನ್ನ ಪತ್ನಿ, ಮೂವರು ಹೆಣ್ಣು ಮಕ್ಕಳು ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅವರ ಕೊಲೆಗೆ ಯತ್ನಿಸಿದ್ದಾನೆ. ಬೆಂಕಿ ಇಟ್ಟ ಬಳಿಕ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಗಾಯಾಳುಗಳ ಕಿರುಚಾಟದಿಂದ ಎಚ್ಚೆತ್ತ ಗ್ರಾಮಸ್ಥರು ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಪತ್ನಿ ಶಾಂತಮ್ಮ (49) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಹೆಣ್ಣು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ. ಎಲ್ಲರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಆಗಿದ್ದಾರೆ
ಇತ್ತ ಬಾಳಿಗೆ ಕೊಳ್ಳಿಯಿಟ್ಟು ಪರಾರಿಯಾಗಿದ್ದ ಆರೋಪಿ ರಾಮಾಂಜಿನಪ್ಪನನ್ನ ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ. ಕೇವಲ ಪತ್ನಿ ಬಳಿ 500 ರೂಪಾಯಿ ಹಣ ಸಿಕ್ತು ಅಂತ ಪತ್ನಿ, ಮೂವರು ಮಕ್ಕಳಿಗೆ ಬೆಂಕಿ ಇಡೋಕೆ ಹೊರಟ ಪತಿ ಇದೀಗ ಜೈಲು ಪಾಲಾಗಿದ್ದಾನೆ.