ನ್ಯೂಸ್ ನಾಟೌಟ್ : ಗುಜರಾತ್ನ ಸುರೇಂದ್ರನಗರ ಜಿಲ್ಲೆಯಲ್ಲಿ ಬುಧವಾರ ಮಾರ್ಚ್ ೮ರಂದು ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರ ತನ್ನ ಎರಡು ವರ್ಷದ ಮಗನನ್ನು ಕೊಂದಿದ್ದಾರೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ಹುಸೇನಾ ವಾಘರ್ ಮತ್ತು ಆಕೆಯ ಪ್ರಿಯಕರ ಜಾಕೀರ್ ಫಕೀರ್ ಎಂದು ಗುರುತಿಸಲಾಗಿದೆ. ಮಗುವಿನ ಹತ್ಯೆಗಾಗಿ ಅವರಿಬ್ಬರ ವಿರುದ್ಧ ಸೆಕ್ಷನ್ 302 ಮತ್ತು 114 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹುಸೇನಾ ಅವರ ಪತಿ ಸಲೀಂ ವಾಘರ್ ಅವರು ದೂರು ದಾಖಲಿಸಿದ್ದಾರೆ. ದಂಪತಿಗಳು ಸುಮಾರು ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು ಮತ್ತು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು – ನಾಲ್ಕು ವರ್ಷದ ರೆಹಾನ್ ಮತ್ತು ಎರಡು ವರ್ಷದ ಆರ್ಯನ್. ಸಲೀಂ ಮತ್ತು ಹುಸೇನಾ ಸುಮಾರು ಎರಡು ವರ್ಷಗಳ ಹಿಂದೆ ಬೇರ್ಪಟ್ಟಿದ್ದರು.
ಗಂಡನಿಂದ ಪ್ರತ್ಯೇಕವಾದ ಬಳಿಕ ಆಕೆ ಮಕ್ಕಳೊಂದಿಗೆ ತನ್ನ ತಾಯಿಯ ಮನೆಗೆ ಹೋಗಿದ್ದು, ಕಲ ಸಮಯದ ನಂತರ ಸುಮಾರು ಒಂದೂವರೆ ತಿಂಗಳ ಹಿಂದೆ ಜಿಲ್ಲೆಯ ವಾಧ್ವಾನ್ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಪ್ರೇಮಿಯೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದಳು ಎಂದು ವರದಿ ತಿಳಿಸಿದೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಅವಳು ಪ್ರೇಮಿಯ ಜೊತೆ ವಾಸಿಸುವಾಗ ತನ್ನ ಕಿರಿಯ ಮಗನನ್ನು ತನ್ನೊಂದಿಗೆ ಕರೆತಂದಿದ್ದಳು ಹಾಗು ಇನ್ನೋರ್ವ ಮಗ ರೆಹಾನ್ ತನ್ನ ಅಜ್ಜಿ ಮನೆಯಲ್ಲೇ ಉಳಿದಿದ್ದ ಎಂದು ವರದಿ ತಿಳಿಸಿದೆ.
ಮಾರ್ಚ್ 8 ರಂದು ಅಯಾನ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಸಲೀಂ ಅವರ ಪತ್ನಿಯ ಸೋದರ ಮಾವನಿಂದ ಕರೆ ಬಂದಿತ್ತು. ಮಗು ಆರ್ಯನ್ ನನ್ನು ರಾಜ್ಕೋಟ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ.
ಹುಸೇನಾ ಮತ್ತು ಆಕೆಯ ಪ್ರಿಯಕರನಿಂದ ಥಳಿಸಲ್ಪಟ್ಟಿರುವ ಬಗ್ಗೆ ಆತನ ಸಂಬಂಧಿಕರಿಂದ ತಿಳಿದು ಬಂದಿದೆ ಎಂದು ಸಲೀಂ ಪೊಲೀಸರಿಗೆ ತಿಳಿಸಿದ್ದಾರೆ. ಸಲೀಂ ಅವರು ಅಂತಿಮ ವಿಧಿಗಳನ್ನು ಮಾಡುವಾಗ ಆರ್ಯನ್ ಅವರ ದೇಹದ ಮೇಲೆ ಗಾಯದ ಗುರುತುಗಳನ್ನು ಗಮನಿಸಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೋಸ್ಟ್ಮಾರ್ಟಮ್ ವರದಿಯು ಚಿತ್ರಹಿಂಸೆಯಿಂದ ಅಯಾನ್ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದೆ. ಈ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಇಲಾಖೆ ಇಳಿಸಿದೆ.