ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ೪೦ ವರ್ಷ ದಾಟಿದ ನಂತರ ಮಹಿಳೆಯರಿಗೆ ಮಕ್ಕಳಾಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಅದಕ್ಕಾಗಿ ಹೆಣ್ಮಕ್ಕಳಿಗೆ ಬೇಗನೆ ಮದುವೆಯನ್ನೂ ಮಾಡಿಸುತ್ತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಗಂಡಸರೂ ಪ್ರೆಗ್ನೆಂಟ್ ಆಗಿರುವ ವರದಿಯನ್ನು ಓದಿದ್ದೇವೆ.ಇದೀಗ ಇಲ್ಲೊಬ್ಬ ೪೭ ವರ್ಷದ ಮಹಿಳೆ ಬಸುರಿಯಾಗಿದ್ದಾಳೆ.ಈ ವಿಷಯ ಕೇಳಿ ಮದುವೆ ವಯಸ್ಸಿಗೆ ಬಂದ ಆಕೆಯ ೨೩ ವರ್ಷದ ಮಗಳೇ ಶಾಕ್ ಆಗಿದ್ದಾಳೆ.
ಯೆಸ್, ಈ ವಿಷಯವನ್ನು ಸ್ವತಃ ಮಗಳೇ ಪೋಸ್ಟ್ ಮಾಡುತ್ತಾ ತಿಳಿಸಿದ್ದಾಳೆ. 23 ವರ್ಷದ ಯುವತಿ ಆರ್ಯ ಪಾರ್ವತಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಹಂಚಿಕೊಂಡಿದ್ದು, ತಾಯಿ ಗರ್ಭಿಣಿಯಾಗಿರುವುದಕ್ಕೆ ಖುಷಿಪಟ್ಟಿದ್ದೇನೆ ಎಂದಿದ್ದಾಳೆ. ನನ್ನ ತಾಯಿಗೆ 47 ವರ್ಷ. ಈಕೆ ಈಗ ತುಂಬು ಗರ್ಭಿಣಿ. ನನ್ನ ತಂದೆ, ತಾಯಿ ಈ ವಿಚಾರವನ್ನು ನನಗೆ ತಿಳಿಸಲು ಮೊದಲಿಗೆ ಹಿಂದೇಟು ಹಾಕಿದ್ರು. ಒಂದು ದಿನ ನನ್ನ ತಂದೆಯಿಂದ ನನಗೆ ಫೋನ್ ಬಂತು. ನಿನ್ನ ತಾಯಿ ಗರ್ಭಿಣಿ ಎಂದು ಅಪ್ಪ ಅಂದಾಗ ಒಂದು ಕ್ಷಣ ಶಾಕ್ ಎಂದು ಬರೆದುಕೊಂಡಿದ್ದಾಳೆ.
- ಇನ್ಸ್ಟಾಗ್ರಾಮ್ ಲಿಂಕ್
https://www.instagram.com/p/Cpow7R_twQA/?igshid=YmMyMTA2M2Y=
ನನಗೆ ಮೊದಲಿಗೆ ಶಾಕ್ ಆಗಿತ್ತು. ಬಳಿಕ ಬಹಳ ಖುಷಿಯಾಯ್ತು. ನನ್ನ ತಾಯಿಗೆ ಈಗ 8 ತಿ೦ಗಳು. ನನಗೆ ನನ್ನ ತಂಗಿಯನ್ನು ನೋಡಬೇಕು ಅನಿಸುತ್ತಿದೆ. ಆಕೆಯನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೇನೆ. ನನ್ನ ತಾಯಿಯನ್ನು ತುಂಬಾ ಸಂತೋಷದಿಂದಲೇ ಆರೈಕೆ ಮಾಡುತ್ತೇನೆ ಎಂದಿದ್ದಾಳೆ ಪಾರ್ವತಿ.ಒಂದು ಕಾಲದಲ್ಲಿ ಸಾಮಾನ್ಯವಾಗಿ ೨೫-೩೦ನೇ ವಯಸ್ಸಿನ ಮಹಿಳೆಯರಿಗೆ ಮಗು ಆಗುವುದು ಕಷ್ಟ ಎಂಬ ಮಾತಿತ್ತು. ಅದರಲ್ಲೂ 40 ವರ್ಷದ ದಾಟಿದ ಮೇಲೆ ಮಹಿಳೆ ತಾಯಿ ಆಗುವುದು ಅಸಾಧ್ಯದ ಮಾತು ಎಂದೇ ಕೇಳಿ ಬರುತ್ತಿತ್ತು. ಕಾರಣ 40 ವರ್ಷದ ಮೇಲೆ ಮಹಿಳೆಯರ ದೇಹದಲ್ಲಿ ಆಗುವ ಬದಲಾವಣೆಗಳು, ಫಲವತ್ತತೆ ಕಡಿಮೆಯಾಗುವುದು, ಮತ್ತೆ ಅವರಲ್ಲಿ ಮುಟ್ಟು ನಿಲ್ಲುವ ಕಾಲ ಕೂಡ ಹತ್ತಿರವಾಗುತ್ತದೆ.ಈ ಕಾರಣಗಳಿಂದ ಆಕೆ ಬಸುರಿಯಾಗುವುದು ಕಷ್ಟವೆಂದೇ ಹೇಳಲಾಗುತ್ತಿತ್ತು.