ನ್ಯೂಸ್ ನಾಟೌಟ್: ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಬಳಿಕ ಜಮ್ಮು ಕಾಶ್ಮೀರದಲ್ಲಿ ಇಂಥದ್ದೇ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿ ಪ್ರೀತಿಯನ್ನು ತಿರಸ್ಕರಿಸಿದ ಕಾರಣಕ್ಕೆ ರುಂಡ ಕಡಿದು, ಕೈಕಾಲುಗಳನ್ನು ಕತ್ತರಿಸಿ ಊರ ತುಂಬೆಲ್ಲಾ ಎಸೆದು ಬಂದಿದ್ದ ವ್ಯಕ್ತಿಯನ್ನು ಮಾರ್ಚ್ ೮ ರಂದು ಬಂಧಿಸಲಾಗಿದೆ.
ಯುವತಿ ಪ್ರೀತಿಯನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕೆ ರುಂಡ ಕಡಿದು, ಕೈಕಾಲುಗಳನ್ನು ಕತ್ತರಿಸಿ ಊರ ತುಂಬೆಲ್ಲಾ ಎಸೆದು ಬಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆಯ ಕರೆ ವಿವರದ ಮೇಲೆ ಈ ಬಂಧನ ಸಾಧ್ಯವಾಗಿದ್ದು, ಆರೋಪಿಯೂ ಕೂಡ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ವಿವಾಹಿತನಾಗಿದ್ದು, ಕಾರ್ಪೆಂಟರ್ ಕೆಲಸಕ್ಕಾಗಿ ಹುಡುಗಿ ಮನೆಗೆ ಬಂದಿದ್ದ. ಬಂದ ಮೊದಲ ದಿನವೇ ಆಕೆಯನ್ನು ಇಷ್ಟಪಟ್ಟಿದ್ದ, ಹುಡುಗಿ ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸಿದ್ದಾಳೆ ಆಗ ಕೋಪಗೊಂಡ ಆತ ಯುವತಿಯನ್ನು ಹತ್ಯೆ ಮಾಡಿದ್ದಾನೆ.
ಯುವತಿಯನ್ನು ಕೊಂದು ಆಕೆಯ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬದ್ಗಾಮ್ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಎಸೆದ ಆರೋಪದ ಮೇಲೆ ವ್ಯಕ್ತಿಯನ್ನು ಮಧ್ಯ ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 8 ರಂದು ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಸೋಬುಗ್ನ ತನ್ವೀರ್ ಅಹ್ಮದ್ ಖಾನ್ ಎಂಬಾತ ತನ್ನ 30 ವರ್ಷದ ಸಹೋದರಿ ಮಾರ್ಚ್ 7 ರಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಬ್ಬೀರ್ ಬದ್ಗಾಮ್ ಜಿಲ್ಲೆಯ ಓಂಪೋರಾ ಪ್ರದೇಶದ ನಿವಾಸಿ.