ನ್ಯೂಸ್ ನಾಟೌಟ್: ತಲಕಾವೇರಿ ಹಾಗೂ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಇ-ಪ್ರಸಾದ ವಿತರಣೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸೋಮವಾರ ಚಾಲನೆ ನೀಡಿದ್ದಾರೆ. ಇನ್ನು ಮುಂದೆ ಮನೆಯಲ್ಲೇ ಕುಳಿತು ಭಕ್ತರು ಪ್ರಸಾದವನ್ನು ಬುಕ್ ಮಾಡಬಹುದು.
‘ಕಾವೇರಿ ಭಕ್ತರು ಮನೆಯಲ್ಲೇ ಕುಳಿತು www.indiapost.gov.in ಜಾಲತಾಣಕ್ಕೆ ಭೇಟಿ ನೀಡಿ ಪ್ರಸಾದಕ್ಕೆ ಬುಕ್ ಮಾಡಿಕೊಳ್ಳಬಹುದು. ದೇವಾಲಯ ಅಡಳಿತ ಮಂಡಳಿಯಿಂದ ₹ 300 ದರ ನಿಗದಿಪಡಿಸಲಾಗಿದೆ. 100 ಎಂ.ಎಲ್. ಕಾವೇರಿ ತೀರ್ಥ, 100 ಗ್ರಾಂ. ಪಂಚಕಜ್ಜಾಯ, ತಲಕಾವೇರಿ ಕ್ಷೇತ್ರದ ಕುಂಕುಮ, ಭಗಂಡೇಶ್ವರ ದೇವಾಲಯದಿಂದ ಗಂಧ ಪ್ರಸಾದವನ್ನು ನೀಡಲಾಗುತ್ತದೆ’ ಎಂದರು. ‘ದೇಶದ ಯಾವುದೇ ಭಾಗದಿಂದ ಅಂಚೆ ಕಚೇರಿಯಲ್ಲಿ ಇ–ಪೇಮೆಂಟ್ ಮೂಲಕ ಬುಕ್ ಮಾಡಬಹುದು. ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದ ತಲುಪಿಸಲಾಗುತ್ತದೆ. ಮಾಹಿತಿಗೆ ಸಹಾಯವಾಣಿ: 18002666868 ಸಂಪರ್ಕಿಸಬಹುದು’ ಎಂದು ತಿಳಿಸಿದರು.